Latest

ನಾಳೆಯಿಂದ ಶಬರಿಮಲೆ ಅಯ್ಯಪ್ಪ ದೇವಾಲಯ ಓಪನ್; ಭಕ್ತರಿಗಾಗಿ ಇಲ್ಲಿದೆ ಮಾಹಿತಿ

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಬಾಗಿಲು ನಾಳೆಯಿಂದ ತೆರೆಯಲಿದ್ದು, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕಟ್ಟುನಿಟ್ಟಿನ ತಪಾಸಣೆ ಮೂಲಕ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ.

ಮಂಡಲಂ ಮಕರವಿಲಕ್ಕು ಅವಧಿಕಾಗಿ ನಾಳೆಯಿಂದ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ತೆರೆಯಲಾಗುತ್ತಿದ್ದು, ಕೋವಿಡ್ ನೆಗೆಟಿವ್ ಬಂದವರನ್ನು ಮಾತ್ರ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಇದೇ ಮೊದಲ ಬಾರಿಗೆ ಯಾತ್ರಾಸ್ಥಳ ವರ್ಚುವಲ್ ಸರದಿ ವ್ಯವಸ್ಥೆಗೆ ಒಳಪಟ್ಟಿದೆ.

ಶಬರಿಮಲೆಯ ಬೇಸ್ ಕ್ಯಾಂಪ್ ಗಳಾದ ಪಂಪಾ ಹಾಗೂ ನಿಲಕ್ಕಲ್ ನಲ್ಲಿ ಕೋವಿಡ್ ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಭಕ್ತರು ಚಾರಣಕ್ಕೆ ಮುನ್ನ ಕೋವಿಡ್ ಪರೀಕ್ಷೆ ಕಡ್ಡಾಯವಾಗಿದೆ. ತಿರುವನಂತಪುರಂ, ತಿರುವಲ್ಲ, ಚೆಂಗನೂರು ಮತ್ತು ಕೊಟ್ಟಾಯಂಗಳಲ್ಲಿನ ರೈಲ್ವೆ ಹಾಗೂ ಬಸ್ ನಿಲ್ದಾಣಗಳು ಸೇರಿದಂತೆ ವಿವಿಧೆಡೆಗಳಲ್ಲಿ ಆಂಟಿಜನ್ ಟೆಸ್ಟ್ ಗೆ ಸಿದ್ಧತೆ ನಡೆಸಲಾಗಿದೆ.

ಬೆಟ್ಟಹತ್ತುವ ಅಥವಾ ಚಾರಣದ ವೇಳೆ ಮಾಸ್ಕ್ ಕಡ್ಡಾಯವಿರುವುದಿಲ್ಲ. ಪ್ರತಿ ಭಕ್ತರಿಗೂ ನಿರ್ದಿಷ್ಟ ಸಮಯ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಶಬರಿಮೆಲೆಗೆ ಬರುವ ಭಕ್ತರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು ಎಂದು ಆಡಳಿತ ಮಂಡಳಿ ತಿಳಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button