Belagavi NewsBelgaum NewsKannada NewsKarnataka NewsPolitics

*ಯೋಧರ ತ್ಯಾಗ-ಬಲಿದಾನ ಯುವಕರಿಗೆ ಪ್ರೇರಣೆ: ಸಚಿವ ಸತೀಶ್‌ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ದೇಶದ ಹುತಾತ್ಮ ಯೋಧರ ತ್ಯಾಗ-ಬಲಿದಾನ ಯುವಕರಿಗೆ ಪ್ರೇರಣೆಯಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಬೆಳಗಾವಿ ನಗರದ ಕೆಪಿಟಿಸಿಎಲ್ ಭವನದಲ್ಲಿ ಅಖಿಲ‌ ಕರ್ನಾಟಕ ಮಾಜಿ ಸೈನಿಕರ ಸಂಘ ಬೆಳಗಾವಿ ಘಟಕದ ವತಿಯಿಂದ ಆಯೋಜಿಸಿದ್ದ 25 ನೇ ಕಾರ್ಗಿಲ್ ವಿಜಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಾಣದ ಹಂಗು ತೊರೆದು ದೇಶ ಹಾಗೂ ದೇಶವಾಸಿಗಳ ರಕ್ಷಣೆಗಾಗಿ ಹೋರಾಡುತ್ತಿರುವ ಯೋಧರ ತ್ಯಾಗ ಬಲಿದಾನಕ್ಕೆ ಬೆಲೆ ಕಟ್ಟಲಾಗದು ಎಂದ ಅವರು, ಯುವಕರು ದೇಶವನ್ನು ಪ್ರೀತಿಸಬೇಕು. ದುಶ್ಚಟಗಳಿಗೆ ಬಲಿಯಾಗದೇ ದೇಶ ಸೇವೆಯಲ್ಲಿ ತೊಡಗಲು ಮುಂದಾಗಬೇಕು. ದೇಶಕ್ಕೆ ಯೋಧರು, ರೈತರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. 

ಗಡಿಯಲ್ಲಿ ಕಾಯುವಲ್ಲಿ ಯೋಧರ ಪಾತ್ರ ದೊಡ್ಡದು ದೇಶಕ್ಕಾಗಿ ತಮ್ಮ ಕುಟುಂಬವನ್ನು ತೊರೆದು  ದೇಶದ ರಕ್ಷಣೆಗೆ ರಕ್ಷಾಕವಚದಂತ್ತಿರುವ ಯೋಧರ ಪಾತ್ರ ದೊಡ್ಡದು. ಅವರ ಶ್ರಮದಿಂದ ನಾಡಿನಲ್ಲಿ ನಾವು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೆವೆ. ಇತಿಹಾಸ ಮೆಲುಕು ಹಾಕುತ್ತಾ ಹೋದಾಗ ದೇಶಕ್ಕೆ ಯೋಧರ ಕೊಡುಗೆ ಬಳಷ್ಟಿದೆ. ಕಾರ್ಗಿಲ್‌ ಯುದ್ದ ಭೂಮಿಯಲ್ಲಿ ದೇಶಕ್ಕಾಗಿ ಹೋರಾಡಿದವರಲ್ಲಿ ಜಿಲ್ಲೆಯಲ್ಲಿ ಐವರು ಯೋಧರನ್ನು ಕಳೆದುಕೊಂಡಿದ್ದೇವೆ, ಅದರಲ್ಲಿ ಇಬ್ಬರು ಯೋಧರು ನಮ್ಮ ಜೊತೆಯಲ್ಲಿರುವುದು ನಮ್ಮ ಸೌಭಾಗ್ಯ. ಸಮಾಜ  ಸೇವೆ ಹಾಗೂ ಅಭಿವೃದ್ಧಿಗೆ  ಸರ್ಕಾರಗಳು ಯೋಧರ ಸಲಹೆಗಳನ್ನು ಬಳಿಸಿಕೊಂಡಾಗ ದೇಶ ಇನ್ನಷ್ಟು ಪ್ರಗತಿಯತ್ತ ಸಾಗಬಹುದು ಎಂದು ಹೇಳಿದರು.

ಇದೇ ವೇಳೆ ಅಖಿಲ‌ ಕರ್ನಾಟಕ ಮಾಜಿ ಸೈನಿಕರ ಸಂಘದ ವಿತಿಯಿಂದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರಿಗೆ ಸನ್ಮಾನಿಸಲಾಯಿತು.

 ಇದೇ ಸಂದರ್ಭದಲ್ಲಿ ವೇಳೆ ಹುತಾತ್ಮ ಸೈನಿಕರ ಕುಟುಂಬ ಸದಸ್ಯರಿಗೆ ಹಾಗೂ ಯುದ್ಧದಲ್ಲಿ ಗಾಯಗೊಂಡ ಮಾಜಿ ಸೈನಿಕರನ್ನು ಸಚಿವ ಸತೀಶ್‌ ಜಾರಕಿಹೊಳಿ ಅವರು ಸನ್ಮಾನಿಸಿ ಕೃತಜ್ಞತೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಮಾಜಿ ಸೈನಿಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button