
ಪ್ರಗತಿವಾಹಿನಿ ಸುದ್ದಿ, ಕೊಪ್ಪಳ: 2023 ನೇ ಸಾಲಿನ ಕವಿ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ಹೊನ್ನಾಳಿಯ ಸದಾಶಿವ ಸೊರಟೂರು ಇವರ ‘ಗಾಯಗೊಂಡ ಸಾಲುಗಳು‘ ಮತ್ತು ಹುಕ್ಕೇರಿಯ ಸಂತೋಷ ನಾಯಿಕರ ‘ಹೊಸ ವಿಳಾಸದ ಹೆಜ್ಜೆಗಳು‘ ಆಯ್ಕೆಯಾಗಿವೆ.
ಈ ಸಲ ಒಟ್ಟು 71 ಹಸ್ತಪ್ರತಿಗಳು ಬಂದಿದ್ದವು. ಪ್ರಶಸ್ತಿಯು ತಲಾ 6,000 ರೂ. ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನಂವಬರ್ ತಿಂಗಳು ಕೊಪ್ಪಳದಲ್ಲಿ ನಡೆಯುವ ‘ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವ’ದಲ್ಲಿ ಪುರಸ್ಕೃತರಿಗೆ ಪ್ರಶಸ್ತಿ ವಿತರಣೆ ಮಾಡಲಾಗುವುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ