Latest

ದೀವಗಿಯ ಸದ್ಗುರು ಶ್ರೀ ರಾಮಾನಂದ ಸ್ವಾಮಿ ಅವಧೂತರು ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ, ಕಾರವಾರ –   ಕುಮಟಾ ತಾಲೂಕಿನ ದೀವಗಿಯ ಸದ್ಗುರು ಶ್ರೀ ರಾಮಾನಂದ ಸ್ವಾಮಿ ಅವಧೂತರು ಶನಿವಾರ ರಾತ್ರಿ ಇಹಲೋಕ ತ್ಯಜಿಸಿದರು. ಅವರಿಗೆ 98 ವರ್ಷ ವಯಸ್ಸಾಗಿತ್ತು. ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಶ್ರೀ ಶ್ರೀಧರ ಸ್ವಾಮೀಜಿಯವರ ಶಿಷ್ಯರಾಗಿದ್ದ ಶ್ರೀಗಳ ಪೂರ್ವಾಶ್ರಮದ ಹೆಸರು ರಾಮಚಂದ್ರ ಹೆಗಡೆ. ಸಿದ್ದಾಪುರ ತಾಲೂಕು ತಟ್ಟಿಕೈ ಮೂಲ ಊರು. ನಾರಾಯಣ ಹೆಗಡೆ ಮತ್ತು ಶ್ರೀಮತಿ ಲಕ್ಷ್ಮಿ ಹೆಗಡೆ ದಂಪತಿಗಳ ಪುತ್ರರಾಗಿದ್ದರು.

ತಮ್ಮ  22 ನೇ ವಯಸ್ಸಿನಲ್ಲಿ, ಶ್ರೀ ಸಹಜಾನಂದ ಅವಧೂತ ಸ್ವಾಮೀಜಿಯವರು ಮಾಘ ಮಾಸದ ಖರ ಸಂವತ್ಸರದ ಅಮವಾಸ್ಯೆಯ ದಿನದಂದು ರಾಮಚಂದ್ರ ಅವರಿಗೆ ಸನ್ಯಾಸ ದೀಕ್ಷೆ ನೀಡಿದರು ಮತ್ತು ರಾಮಚಂದ್ರರು ಸದ್ಗುರು ಶ್ರೀ ರಮಾನಂದ ಸ್ವಾಮಿ ಅವಧೂತರಾದರು.
ಅವರು ಲಕ್ಷಾಂತರ ಭಕ್ತರನ್ನು ಹೊಂದಿದ್ದರು.

ಬಹುತೇಕ ಜಿಲ್ಲೆಗಳಲ್ಲಿ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್; ಸಧ್ಯಕ್ಕಿಲ್ಲ ಲಾಕ್ ಡೌನ್ – ಬೊಮ್ಮಾಯಿ ಸ್ಪಷ್ಟನೆ

Home add -Advt

Related Articles

Back to top button