ಸಾಧು -ಸಂತರು ಸಂಸ್ಕಾರ ನೀಡಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ – ರಮೇಶ ಕತ್ತಿ
ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ : ಧಾರ್ಮಿಕ ಕಾರ್ಯಗಳಿಂದ ಮಠ-ಮಾನ್ಯಗಳು ಸಮಾಜದಲ್ಲಿ ಸ್ವಾಸ್ಥ್ಯ ಪರಿಸರ ನಿರ್ಮಾಣ ಮಾಡುತ್ತಲಿದ್ದು, ಧರ್ಮದ ಕಾರ್ಯಗಳು ಮನುಕುಲಕ್ಕೆ ಉತ್ತಮ ಮಾರ್ಗದರ್ಶನ ಮಾಡುವ ಶಕ್ತಿ ಹೊಂದಿವೆ ಎಂದು ಮಾಜಿ ಸಂಸದ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.
ಸ್ಥಳೀಯ ಶಂಕರಾಚಾರ್ಯ ಸಿದ್ಧ ಸಂಸ್ಥಾನ ಮಠದ ಜಾತ್ರಾ ಮಹೋತ್ಸವ ನಿಮಿತ್ತ ಶಂಕರಲಿಂಗ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ಆರ್ಶೀವಾದ ಪಡೆದ ಅವರು, ಸಮಾಜದಲ್ಲಿರುವ ಪ್ರತಿಯೊಂದು ಜೀವಿಗೆ ವಿದ್ಯೆ ಹಾಗೂ ಸಂಸ್ಕಾರಗಳ ಅಗತ್ಯವಿದ್ದು, ಶಿಕ್ಷಕ ಅಕ್ಷರದ ಮೂಲಕ ವಿದ್ಯೆ ನೀಡಿದರೆ, ಧಾರ್ಮಿಕ, ಆಧ್ಮಾತ್ಮಿಕ, ಸರಿ-ತಪ್ಪುಗಳ ಅರಿವು ಮೂಡಿಸುವ ಮೂಲಕ ಧಾರ್ಮಿಕ ಕೇಂದ್ರಗಳು ಸಾಧು-ಸಂತರು ಸಂಸ್ಕಾರ ನೀಡಿ ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ ಎಂದರು.
ಐತಿಹಾಸಿಕ ಪೀಠವಾಗಿರುವ ಶಂಕರಾಚಾರ್ಯ ಸಂಸ್ಥಾನ ಮಠ ಸಮಾಜದಲ್ಲಿ ಸನಾತನ ಪರಂಪರೆ ಉಳಿಸುವಲ್ಲಿ ಮಹತ್ವದ ಪಾತ್ರವಹಿಸಿದ್ದು, ಶ್ರೀಮಠದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮಿಗಳು ಮಾರ್ಗದರ್ಶನದಲ್ಲಿ ಮಠ-ಸಮಾಜ ಸಾಗುತ್ತಿದೆ ಎಂದರು.
ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರಖಾನೆಯ ಅಧ್ಯಕ್ಷ ನಿಖಿಲ್ ಕತ್ತಿ ಮಾತನಾಡಿ, ಈ ಭಾಗದಲ್ಲಿ ಸಂಕೇಶ್ವರ ಶಂಕರಲಿಂಗ ಮಠ ಹಾಗೂ ನಿಡಸೋಸಿಯ ದುರದುಂಡೀಶ್ವರ ಮಠ ಸೇರಿ ಅನೇಕ ಧಾರ್ಮಿಕ ಕೇಂದ್ರಗಳು ಧಾರ್ಮಿಕತೆ ಪಾವಿತ್ಯತೆಯನ್ನು ಉಳಿಸಿ ಬೆಳೆಸುವ ಜೊತೆಗೆ ಸಮಾಜದ ಅಭ್ಯುದಯಕ್ಕೆ ಉತ್ತಮ ಮಾರ್ಗದರ್ಶನ ನೀಡುತ್ತಲಿವೆ ಎಂದರು.
ಈ ಸಂದರ್ಭದಲ್ಲಿ ಸಂಗಮ ಕಾರಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಬಿಡಿಸಿಸಿ ಬ್ಯಾಂಕ ನಿರ್ದೇಶಕ ಗಜಾನನ ಕ್ವಳ್ಳಿ, ಶ್ರೀಕಾಂತ ಹತನೂರೆ, ಅಮರ ನಲವಡೆ, ಶಂಕರರಾವ ಹೆಗಡೆ, ಸುನೀಲ ಪರ್ವತರಾವ, ಅಜೀತ ಕರಜಗಿ, ಅಭಿಜೀತ ಕುರಣಕರ, ನಾಗೇಶ ಕ್ವಳ್ಳಿ, ಶಿವಾನಂದ ನೇಸರಿ, ರಾಜು ಬೋರಗಾಂವಿ, ರೋಹಣ ನೇಸರಿ, ಸಂತೋಷ ಕಮನೂರೆ, ಸಾಗರ ಜಕಾತಿ, ಹಾರೂನ ಮುಲ್ಲಾ, ರಾಜು ಬಾಂಬರೆ, ಆಸ್.ಆರ್. ಮಾಳಿ ಸೇರಿದಂತೆ ಉಪಸ್ಥಿತರಿದ್ದರು.
34 ವರ್ಷಗಳ ಸುದೀರ್ಘ ಶಿಕ್ಷಕ ವೃತ್ತಿಯಿಂದ ನಿವೃತ್ತಿ ಹೊಂದಿದ ವಿಠ್ಠಲ ಹಲಗೇಕರ ಅವರಿಗೆ ಸನ್ಮಾನ
https://pragati.taskdun.com/falicitation-to-vitthala-halagekara-who-retired-from-a-long-teaching-career-of-34-years/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ