
ಆತನ ಪತ್ನಿಯಾಗಿಯೇ ಬಾಳುವುದಾಗಿ ಪ್ರತಿಜ್ಞೆ
ಪ್ರಗತಿವಾಹಿನಿ ಸುದ್ದಿ: ಮಗಳು ಬೇರೆ ಜಾತಿಯವನನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದ ಕೂಡಲೆ ಯುವಕನನ್ನು ಕಲ್ಲಿನಿಂದ ಜಜ್ಜಿ, ಗುಂಡು ಹಾರಿಸಿ ಯುವತಿ ಕುಟುಂಬದವರು ಹತ್ಯೆ ಮಾಡಿದ್ರು, ಆದರೆ ಆತನ ಅಂತ್ಯಕ್ರಿಯೆ ವೇಳೆ ಪ್ರೀಯಕರನ ಕೈಯಿಂದಲೇ ಹಣೆಗೆ ಕುಂಕುಮ ಹಚ್ಚಿಕೊಂಡು ಆತನ ಮನೆಯಲ್ಲಿ ಸೊಸೆಯಾಗಿ ಬಾಳುವುದಾಗಿ ಯುವತಿ ಪ್ರತಿಜ್ಞೆ ಮಾಡಿದ್ದಾಳೆ. ನಂದೇಡ್ ನಲ್ಲಿ ಈ ಘಟನೆ ನಡೆದಿದೆ.
ಆಂಚಲ್ ಎಂಬಾಕೆಗೆ ತನ್ನ ಸಹೋದರರ ಮೂಲಕ ಸಕ್ಷಮ್ ಎಂಬಾತನ ಪರಿಚಯವಾಗಿತ್ತು ಅದು ಕ್ರಮೇಣವಾಗಿ ಪ್ರೀತಿಗೆ ತಿರುಗಿತ್ತು. ಮೂರು ವರ್ಷಗಳ ಕಾಲ ಅವರು ಪ್ರೀತಿಸುತ್ತಿದ್ದರು. ಮನೆಯಲ್ಲಿ ವಿಚಾರ ತಿಳಿಸಿದಾಗ ಬೇರೆ ಜಾತಿ ಎಂದು ಯಾರೂ ಮದುವೆಗೆ ಒಪ್ಪಲು ಸಿದ್ಧರಿರಲಿಲ್ಲ. ಹಲವು ಬಾರಿ ಯುವತಿಯ ಮನೆಯವರು ಸಕ್ಷಮ್ಗೆ ಬೆದರಿಕೆ ಹಾಕಿದ್ದರೂ ಅವರಿಬ್ಬರ ಸಂಬಂಧ ಹಾಗೆಯೇ ಮುಂದುವರೆದಿತ್ತು. ಕೋಪಗೊಂಡ ಆಂಚಲ್ ಮನೆಯವರು ಆತನನ್ನಯ ಹೊಡೆದು ಕೊಂದಿದ್ದಾರೆ.
ಆತನ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದ ಆಕೆ ಆತನ ದೇಹದ ಮೇಲಿದ್ದ ಅರಿಶಿನವನ್ನು ತಾನು ಹಚ್ಚಿಕೊಂಡು ಶವದ ಕೈಯಿಂದ ಹಣೆಗೆ ಕುಂಕುಮ ಹಚ್ಚಿಕೊಂಡು ಸತಿ, ಪತ್ನಿಯರಾದರು. ಕೊನೆಯವರೆಗೂ ಆತನ ಪತ್ನಿಯಾಗಿಯೇ ವಾಸಿಸಲು ನಿರ್ಧರಿಸಿದ್ದಾಳೆ.
ಆತನನ್ನು ಕೊಂದವರಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾಳೆ. ಪೊಲೀಸರು ಆರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.



