ಪ್ರಗತಿವಾಹಿನಿ ಸುದ್ದಿ, ಮುಂಬೈ: ಚಿತ್ರ ನಿರ್ಮಾಪಕ, ನಿರ್ದೇಶಕ ಸಾಜಿದ್ ಖಾನ್ ವಿರುದ್ಧ ಭೋಜಪುರಿ ನಟಿ ರಾಣಿ ಚಟರ್ಜಿ ಲೈಂಗಿಕ ಕುರಿಕುಳದ ಆರೋಪ ಹೊರಿಸಿದ್ದಾರೆ.
“ಸಾಜಿದ್ ನನ್ನನ್ನು ತನ್ನ ಮನೆಗೆ ಆಹ್ವಾನಿಸಿದರಲ್ಲದೆ ಮತ್ತು ಐಟಂ ಸಾಂಗ್‌ನಲ್ಲಿ ಸಣ್ಣ ಲೆಹೆಂಗಾವನ್ನು ಧರಿಸುವಂತೆ ಹೇಳಿದರು. ನನ್ನ ಕಾಲುಗಳನ್ನು ತೋರಿಸಲು ಕೇಳಿಕೊಂಡರು” ಎಂದು ರಾಣಿ ಆರೋಪಿಸಿದ್ದಾರೆ.
ಇಷ್ಟೇ ಅಲ್ಲ, ಇನ್ನೂ ಗಂಭೀರ ಆರೋಪ ಎಸಗಿರುವ ಅವರು, ನಂತರದಲ್ಲಿ ಸಾಜಿದ್ ತಮ್ಮ ಸ್ತನದ ಗಾತ್ರ ಮತ್ತು ಸಂಭೋಗದ ಫ್ರಿಕ್ವೆನ್ಸಿ ಬಗ್ಗೆ ಕೇಳಿದರು ಎಂದು ಹೇಳಿದ್ದಾರೆ.
ಇದೇ ವೇಳೆ ಕಿರಣ್ ಜುನೇಜಾ ಅವರ ಕಾರ್ಯಕ್ರಮದಲ್ಲಿ ಸಾಜಿದ್ ಖಾನ್ ಅವರು ಗೌಹರ್ ಖಾನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಒಪ್ಪಿಕೊಂಡ ಹಳೆಯ ವೀಡಿಯೊ ವೈರಲ್ ಆಗಿದೆ.
ಸಾಜಿದ್ ಅವರು ಗೌಹರ್ ಅವರೊಂದಿಗೆ ಒಂದು ವರ್ಷ ಸಂಬಂಧ ಹೊಂದಿದ್ದರು. ಅವರು ಹೇಳಿದರು, ಆ ದಿನಗಳಲ್ಲಿ, ತಾವು ಕೆಟ್ಟ ಗುಣ ಹೊಂದಿದ್ದು ಹುಡುಗಿಯರೊಂದಿಗೆ ತಿರುಗಾಡುತ್ತಿದ್ದುದಾಗಿ ಮತ್ತು ಅವರಿಗೆ ಸುಳ್ಳು ಹೇಳುತ್ತಿದ್ದುದಾಗಿ ಸಾಜಿದ್ ಹೇಳಿಕೊಂಡಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಒಟ್ಟಾರೆ ಸಾಜಿದ್ ಖಾನ್ ಇತ್ತೀಚಿನ ದಿನಗಳಲ್ಲಿ ಹೆಂಗೆಳೆಯರಿಂದಲೇ ಹೆಸರುವಾಸಿಯಾಗುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ