
ಪ್ರಗತಿವಾಹಿನಿ ಸುದ್ದಿ: ಮಲಯಾಳಂನ ನಟಿ ಪ್ರಾರ್ಥನಾ ಕೃಷ್ಣನ್ ಮತ್ತು ಮಾಡೆಲ್ ಅನ್ಸಿಯಾ ಅವರು ಸಲಿಂಗ ಮದುವೆಯಾಗುವ ಮೂಲಕ ಭಾರಿ ಸುದ್ದಿಯಾಗಿದ್ದಾರೆ.
ಹೌದು, ಮಲಯಾಳಂನ ‘ಕೊಡೆಯಿಡ’ ಎಂಬ ಧಾರಾವಾಹಿಯ ಮೂಲಕ ಪ್ರೇಕ್ಷಕರ ಗಮನ ಸೆಳೆದ ಪ್ರಾರ್ಥನಾ ಕೃಷ್ಣನ್ ನಾಯರ್, ತಮ್ಮ ಆಪ್ತ ಸ್ನೇಹಿತೆಯಾದ ಅನ್ಸಿಯಾ ಜೊತೆಗೆ ಮದುವೆಯಾಗಿದ್ದಾರೆ. ಇದೇ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದೇವಸ್ಥಾನವೊಂದರಲ್ಲಿ ಪರಸ್ಪರ ತಾಳಿ ಹಾಕುವುದು, ಹಾರ ಬದಲಾಯಿಸುವುದನ್ನು ಪ್ರಾರ್ಥನಾ ಇನ್ ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಆ ಫೋಟೋ ಜೊತೆಗೆ ಮನಸ್ಸಿನಲ್ಲಿ ವಿಷ ತುಂಬಿದ ಜನರ ಮುಂದೆ ನಾಟಕವಾಡುವ ಸಂಕುಚಿತ ಮನಸ್ಸುಗಳು ದೂರವಾಗಲಿ ಎಂದು ಬರೆದುಕೊಂಡಿದ್ದಾರೆ.