Belagavi NewsBelgaum NewsKannada NewsKarnataka News

*ಸಮೃದ್ಧ ಅಂಗವಿಕಲರ ಸಂಸ್ಥೆ ಅಂದ ಕಲಾವಿದರಿಂದ ಸಂಗೀತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ: ಸಮೃದ್ಧ ಅಂಗವಿಕಲರ ಸಂಸ್ಥೆಯು ಅಂಗವಿಕಲರ ಕ್ಷೇಮಾಭಿವೃದ್ಧಿಗಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗಾಗಿ ಶ್ರಮಿಸುತ್ತಿದ್ದು ಪ್ರಚಲಿತವಾಗಿ ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳಿಗೆ ಉಚಿತ ಊಟ ವಸತಿ ಹಾಗೂ ಶಿಕ್ಷಣ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ ಸ್ವಯಂ ಉದ್ಯೋಗ ತರಬೇತಿಯನ್ನು ನೀಡುತ್ತಾ ಬರುತ್ತಿದೆ.

ಸಂಸ್ಥೆಯ ವಿವಿಧ ಯೋಜನೆಗಳಲ್ಲಿ ಒಂದಾದ ಅಂದ ಕಲಾವಿದರ ಪ್ರತಿಭೆಯನ್ನು ಬೆಳಗಿನ ಕಡೆಗೆ ತರುವ ಪ್ರಯತ್ನದ ಭಾಗವಾಗಿ
ಅಂದ ಕಲಾವಿದರಿಂದ ಸಂಗೀತ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರವಿವಾರ ದಿನಾಂಕ 3 ಆಗಸ್ಟ್ 2025 ರಂದು ಸಾಯಂಕಾಲ 4 ಗಂಟೆಯಿಂದ 7 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.


ಕಾರ್ಯಕ್ರಮ ನಡೆಯುವ ಸ್ಥಳ ಶ್ರೀ ಜಗಜ್ಯೋತಿ ಬಸವೇಶ್ವರ ಕಲ್ಯಾಣ ಮಂಟಪ, ದಾನಮ್ಮದೇವಿ ಮಂದಿರ, ಮಹಾತ್ಮ ಫುಲೆ ರೋಡ್, ಶಹಾಪುರ, ಬೆಳಗಾವಿ.


ಹೆಚ್ಚಿನ ಮಾಹಿತಿಗಾಗಿ ಸಮೃದ್ಧ ಅಂಗವಿಕಲರ ಸಂಸ್ಥೆಯ ಅಧ್ಯಕ್ಷರು ಶಿವನಗೌಡ ಪಾಟೀಲ್, 8792139345, ಕಾರ್ಯದರ್ಶಿಗಳು
ಪ್ರಶಾಂತ್ ಪೋತದಾರ 7760716234 ಸಂಪರ್ಕಿಸಬಹುದು.

Home add -Advt

Related Articles

Back to top button