
ಪ್ರಗತಿವಾಹಿನಿ ಸುದ್ದಿ, ಕೋಲಂಬೊ: ಖ್ಯಾತ ಕ್ರಿಕೆಟಿಗ ಸನತ್ ಜಯಸೂರ್ಯ ಅವರು 27 ವರ್ಷಗಳ ಹಿಂದೆ ವಿಶ್ವಕಪ್‌ನಲ್ಲಿ ಗೆದ್ದ ಕಾರಿನೊಂದಿಗೆ ಆಗ ಮತ್ತು ಈಗಿನ ಫೋಟೋಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.
ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಅವರು 1996 ರ ವಿಶ್ವಕಪ್‌ನಲ್ಲಿ ಸರಣಿಯ ಆಟಗಾರನಾಗಿ ಗೆದ್ದ ವೇಳೆ ಈ ಕಾರು ಪಡೆದಿದ್ದರು. ಆಗಿನ ‘ಯುವ’ ಕ್ರಿಕೆಟಿಗ, ಹೊಸ ಕಾರು, ಅದರೊಂದಿಗೆ ಈಗ ಮಾಗಿದ ಸನತ್ ಜೊತೆ ಹಳೆಯದಾದ ಕಾರು ಚಿತ್ರದಲ್ಲಿ ಕಾಣುತ್ತಿದ್ದು ಸಾವಿರ ಮಾತುಗಳು, ಭಾವನೆಗಳು, ಅರ್ಥಗಳನ್ನು ಬಿಚ್ಚಿಟ್ಟಿದೆ.
ಈ ಚಿತ್ರಕ್ಕೆ ಅವರು ಸುವರ್ಣ ನೆನಪುಗಳು… 27 ವರ್ಷಗಳು… 1996 ರ ವಿಶ್ವಕಪ್ ಮ್ಯಾನ್ ಆಫ್ ಸೀರೀಸ್ ಕಾರು ಎಂದು ಕ್ಯಾಪ್ಷನ್ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬರು “ಈ ಕಾರನ್ನು ಇನ್ನೂ ಚೆನ್ನಾಗಿ ನೆನಪಿಸಿಕೊಳ್ಳಿ… ನಾನು ಚಿಕ್ಕವನಿದ್ದಾಗ ಆಡಿಯನ್ನು ಮೊದಲ ಬಾರಿಗೆ ನೋಡಿದ್ದೆ” ಎಂದು ಬರೆದಿದ್ದಾರೆ.