Film & EntertainmentKarnataka NewsLatest

*ಮ್ಯಾಂಗೋ ಪಚ್ಚ ರಿಲೀಸ್ ಡೇಟ್ ಅನೌನ್ಸ್: ಸಂಕ್ರಾಂತಿಗೆ ಸಂಚಿತ್ ಅಬ್ಬರ ಶುರು*

ಪ್ರಗತಿವಾಹಿನಿ ಸುದ್ದಿ: ಕಿಚ್ಚ ಸುದೀಪ್ ಅಳಿಯ ಸಂಚಿತ್ ಸಂಜೀವ್ ಅಭಿನಯದ ಬಹುನಿರೀಕ್ಷೆಯ ಮ್ಯಾಂಗೋ ಪಚ್ಚ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈಗಾಗಲೇ ಟೀಸರ್ ಮತ್ತು ರೆಟ್ರೋ ಲುಕ್ ಮೂಲಕ ಸಿನಿ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ಮ್ಯಾಂಗೋ ಪಚ್ಚ ಇದೀಗ ಮುಂದಿನ ವರ್ಷ ಸಂಕ್ರಾಂತಿಗೆ ಅಂದರೆ ಜನವರಿ 15ಕ್ಕೆ ಅದ್ದೂರಿಯಾಗಿ ತೆರೆಗೆ ಬರುಲು ಸಜ್ಜಾಗಿದೆ. ಮುಂದಿನ ವರ್ಷಾರಂಭದಲ್ಲೇ ಸಂಚಿತ್ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಅಬ್ಬರಿಸಲಿದ್ದಾರೆ. ಈ ಮೂಲಕ ಸಂಚಿತ್ ಸಿನಿಮಾರಂಗದಲ್ಲಿ ಮಾವನ ಲೆಗೆಸಿಯನ್ನು ಮುಂದುವರೆಸಲಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಸಂಕ್ರಾಂತಿ ಹಬ್ಬಕ್ಕೆ ಕನ್ನಡದ ಯಾವ ಸಿನಿಮಾಗಳು ರಿಲೀಸ್ ಆಗುತ್ತಿರಲಿಲ್ಲ. ಸಂಕ್ರಾಂತಿ ಪರಭಾಷೆಯ ಸ್ಟಾರ್ ಸಿನಿಮಾಗಳಿಗೆ ಮಾತ್ರ ಮೀಸಲಾಗಿತ್ತು. ಪರಭಾಷೆಯ ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತಿತ್ತು. ಹಾಗಾಗಿ ಕನ್ನಡದ ಸಿನಿಮಾಗಳನ್ನು ರಿಲೀಸ್ ಮಾಡಲು ಯಾರು ಮುಂದಾಗುತ್ತಿರಲಿಲ್ಲ. ಆದರೀಗ ಮ್ಯಾಂಗೋ ಪಚ್ಚ ಸಂಕ್ರಾಂತಿಗೆ ಬರ್ತಿದೆ, ಅದರಲ್ಲೂ ಚೊಚ್ಚಲ ನಟನೆಯ ಸಂಚಿತ್ ಜನವರಿ 15ಕ್ಕೆ ತೆರೆಮೇಲೆ ಅಬ್ಬರಿಸುವ ಮೂಲಕ ಈ ಬಾರಿ ಸಂಕ್ರಾಂತಿಗೆ ಕನ್ನಡದಲ್ಲೂ ಸಿನಿಮಾ ಬರ್ತಿದೆ ಎಂದು ಭಾರತೀಯ ಸಿನಿ ಜಗತ್ತಿಗೆ ಹೇಳುತ್ತಿದ್ದಾರೆ.

ಈಗಾಗಲೇ ಆಡಿಯೋ ಮಾರಾಟದ ವಿಚಾರದಲ್ಲಿ ಮ್ಯಾಂಗೋ ಪಚ್ಚ ದಾಖಲೆ ಬರೆದಿದೆ. ಬರೋಬ್ಬರಿ 1.2 ಕೋಟಿ ರೂಪಾಯಿಗೆ ಆಡಿಯೋ ಹಕ್ಕು ಮಾರಾಟವಾಗಿದೆ. ಚೊಚ್ಚಲ ಹೀರೋ ಒಬ್ಬರ ಸಿನಿಮಾದ ಆಡಿಯೋ ಈ ಮಟ್ಟಕ್ಕೆ ಮಾರಾಟವಾಗಿರುವುದು ನಿಜಕ್ಕೂ ಖುಷಿಯ ವಿಚಾರ. ರಿಲೀಸ್ ಮೊದಲೇ ದಾಖಲೆ ಬರೆಯುತ್ತಿರುವ ಮ್ಯಾಂಗೋ ಪಚ್ಚ ಇನ್ನೂ ಬಿಡುಗಡೆ ಆದ್ಮೇಲೆ ಯಾವೆಲ್ಲ ದಾಖಲೆಗಳನ್ನು ಧೂಳಿಪಟಮಾಡಲಿದಿಯೋ ಕಾದುನೋಡಬೇಕಿದೆ.

Home add -Advt

ಮ್ಯಾಂಗೋ ಪಚ್ಚ ವಿವೇಕ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಮೈಸೂರು ಮೂಲದ ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, 2001 ರಿಂದ 2011ರ ಅವಧಿಯಲ್ಲಿ ಮೈಸೂರಿನಲ್ಲಿ ನಡೆದ ಪ್ರಮುಖ ಘಟನೆಗಳು ಈ ಸಿನಿಮಾದಲ್ಲಿದೆ. ಬಹುತೇಕ ಚಿತ್ರೀಕರಣ ಮೈಸೂರಿನಲ್ಲೇ ಮಾಡಲಾಗಿದೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ ಮ್ಯಾಂಗೋ ಪಚ್ಚ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸುತ್ತಿದೆ. ಮ್ಯಾಂಗೋ ಪಚ್ಚ ಚಿತ್ರಕ್ಕೆ ಕೆಆರ್‌ಜಿ ಮತ್ತು ಕಿಚ್ಚ ಸುದೀಪ್ ಅವರ ಸುಪ್ರಿಯಾನ್ವಿ ಪ್ರೊಡಕ್ಷನ್ಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವುದು ವಿಶೇಷ. ಸಂಚಿ ಮೊದಲ ಸಿನಿಮಾಗೆ ನಾಯಕಿಯಾಗಿ ನಟಿ ಕಾಜಲ್ ಕುಂದರ್ ಕಾಣಿಸಿಕೊಳ್ಳುತ್ತಿದ್ದಾರೆ.. ಸಂಚಿತ್‌ ಹಾಗೂ ಕಾಜಲ್‌ ಜೊತೆಯಾಗಿ ಮಯೂರ್‌ ಪಟೇಲ್‌ ,ಬಾವನಾ, ಹಂಸ, ಹರಿಣಿ ಶ್ರೀಕಾಂತ್‌, ವಿಜಯ ರಾಘವೇಂದ್ರ ಅವರ ಅಳಿಯ ಜೈ ಗೋಪಿನಾಥ್‌ , ಪ್ರಶಾಂತ್‌ ಹಿರೇಮಠ್‌, ಇನ್ನೂ ಅನೇಕರು ಅಭಿನಯಿಸಿದ್ದಾರೆ..ಇನ್ನು ಶೇಖರ್‌ ಚಂದ್ರ ಕ್ಯಾಮೆರಾ ವರ್ಕ್‌ ಸಿನಿಮಾಗಿದ್ದು ಚರಣ್‌ ರಾಜ್‌ ಸಂಗೀತ ನಿರ್ದೇಶನ ಮಾಡಿದ್ದಾರೆ..ರವಿವರ್ಮ ಹಾಗೂ ರಿಯಲ್‌ ಸತೀಶ್‌ ಮ್ಯಾಂಗೋ ಪಚ್ಚ ಸಿನಿಮಾಗೆ ಸ್ಟಂಟ್‌ ಡೈರೆಕ್ಟ್‌ ಮಾಡಿದ್ದಾರೆ ಎ ಹರ್ಷ ಸಿನಿಮಾದ ಮೆಲೋಡಿ ಹಾಡೊಂದಕ್ಕೆ ನೃತ್ಯ ನಿರ್ದೇಶನ ಮಾಡಿದ್ದಾರೆ.

Related Articles

Back to top button