Latest

ಕನ್ನಡ ಚಿತ್ರರಂಗದಲ್ಲಿ ಮತ್ತೆ ಮೀಟೂ ಆರೋಪ; ಕಹಿ ಅನುಭವ ಬಿಚ್ಚಿಟ್ಟ ಖ್ಯಾತ ನಟಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಲವು ದಿನಗಳಿಂದ ತಣ್ಣಗಾಗಿದ್ದ ಮೀಟೂ ಆರೋಪ ಇದೀಗ ಕನ್ನಡ ಚಿತ್ರರಂಗದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿದೆ. ಖ್ಯಾತ ನಟಿ ಆಶಿತಾ ತಮಗಾದ ಕಹಿ ಅನುಭವವನ್ನು ಹೇಳುತ್ತಾ ಇದೇ ಕಾರಣಕ್ಕೆ ಚಿತ್ರರಂಗದಿಂದಲೇ ದೂರಾಗಿದ್ದಾಗಿ ತಿಳಿಸಿದ್ದಾರೆ.

ನಟ, ನಿರ್ದೇಶಕ ರಘುರಾಮ್ ಅವರ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿರುವ ನಟಿ ಆಶಿತಾ, ಸಿನಿಮಾ ಸೆಟ್ ನಲ್ಲಿ ನಾನು ಅವರು ಬಯಸಿದಂತೆ ಇರಲಿಲ್ಲ ಎಂಬ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿತ್ತು. ನಾನು ಅವರು ಹೇಳಿದಂತೆ ಅಡ್ಜಸ್ಟ್ ಮೆಂಟ್ ಆಗಿಲ್ಲ. ಹೀಗೆ ಮಾಡಿದರೆ ಇನಷ್ಟು ಅವಕಾಶ ಕೊಡ್ತೀವಿ. ನಾವು ಹೇಳಿದಂತೆ ನಡೆದುಕೊಂಡರೆ ಎಕ್ಸ್ಟ್ರಾ ಪೇಮೆಂಟ್ ಕೊಡ್ತೀವಿ ಎಂದು ಹೇಳುತ್ತಿದ್ದರು. ಆದರೆ ನಾನು ಅಂತದ್ದಕ್ಕೆ ಎಂದಿಗೂ ಒಪ್ಪಿಕೊಂಡಿಲ್ಲ. ಹಾಗಾಗಿ ಚಿತ್ರರಂಗದಿಂದ ದೂರಾದೆ ಎಂದು ಹೇಳಿದ್ದಾರೆ.

ಅಲ್ಲದೇ ಚಿತ್ರರಂಗದಲ್ಲಿ ಉತ್ತಮವಾದ ಹಾಗೂ ಆರೋಗ್ಯಕರವಾದ ವಾತಾವರಣ ಇರಲಿಲ್ಲ ಹಾಗಾಗಿ ಬೇಸರದಿಂದ ಸಿನಿರಂಗದಿಂದ ದೂರ ಉಳಿದಿದ್ದೇನೆ ಎಂದು ಹೇಳಿದ್ದಾರೆ. ಆದರೆ ಆಶಿತಾ ಯಾವುದೇ ನಿರ್ದಿಷ್ಟ ನಿರ್ದೇಶಕರ ಅಥವಾ ನಿರ್ಮಾಪರ ಹೆಸರನ್ನು ಸಂದರ್ಶನದಲ್ಲಿ ಉಲ್ಲೇಖಿಸಿಲ್ಲ.

ನಟಿ ಆಶಿತಾ, ಆಕಾಶ್, ರೋಡ್ ರೋಮಿಯೋ, ಹಾರ್ಟ್ ಬೀಟ್, ತವರಿನ ಸಿರಿ, ಬಾ ಬಾರೋ ರಸಿಕ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು.

Home add -Advt

ಮಹಿಳೆಗೆ ಚಾಕು ತೋರಿಸಿ ಬೆದರಿಸಿ ಅತ್ಯಾಚಾರಕ್ಕೆ ಯತ್ನ

https://pragati.taskdun.com/latest/attempt-to-rapewomanbangalorecomplaint-file/

Related Articles

Back to top button