
ಬೆಂಗಳೂರು: ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ ಕೇವಲ 39 ವರ್ಷ ವಯಸ್ಸಾಗಿತ್ತು. ಅತಿ ಚಿಕ್ಕವಯಸ್ಸಿನಲ್ಲೇ ಚಿರಂಜೀವಿ ಸರ್ಜಾ ನಿಧನರಾಗಿರುವುದು ಇಡೀ ಕನ್ನಡ ಚಿತ್ರರಂಗಕ್ಕೇ ಆಘಾತವಾಗಿದೆ.
ಕಳೆದ ಎರಡು ಮೂರು ದಿನಗಳ ಹಿಂದೆ ಕೊಂಚ ಅನಾರೋಗ್ಯಕ್ಕೀಡಾದ ಹಿನ್ನಲೆಯಲ್ಲಿ ಚಿರಂಜೀವಿ ಅವರನ್ನು ಸಾಗರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಉಸಿರಾಟದ ತೊಂದರೆ ಅವರಲ್ಲಿ ಕಾಣಿಸಿಕೊಂಡಿತ್ತು. ಕೆಲ ಸಮಯದಲ್ಲೇ ಲಘು ಹೃದಯಾಘಾತಕ್ಕೂಳಗಾಗಿದ್ದರು, ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.
22 ಚಿತ್ರಗಳಲ್ಲಿ ಅಭಿನಯಿಸಿದ್ದ ಚಿರಂಜೀವಿ ಅಭಿಮಾನಿಗಳ ಮನೆಮಾತಾಗಿದ್ದರು. ಚಿರಂಜೀವಿ ಸರ್ಜಾ ಖ್ಯಾತ ನಟಿ ಪತ್ನಿ ಮೇಘನಾ ರಾಜ್ ಅವರನ್ನು ಅಗಲಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ