ರಾಬರ್ಟ್ ಚಿತ್ರದಲ್ಲಿ ಟ್ರಿಪಲ್ ರೋಲ್ ನಲ್ಲಿ ಚಾಲೇಂಜಿಂಗ್ ಸ್ಟಾರ್?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ’ರಾಬರ್ಟ್’ ಸಿನಿಮಾ ಈಗಾಗಲೇ ಪೋಸ್ಟರ್ ಮೂಲಕ ಗಮನ ಸೆಳೆಯುತ್ತಿದೆ. ಸಂಕ್ರಾಂತಿ ಹಬ್ಬದಂದು ಚಿತ್ರದ ಎರಡನೇ ಮೋಷನ್ ಪೋಸ್ಟರ್ ಬಿಡುಗಡೆಯಾಗುತ್ತಿದೆ. ಈ ನಡುವೆ ರಾಬರ್ಟ್ ಚಿತ್ರದಲ್ಲಿ ದರ್ಶನ್ ತ್ರಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂಬ ಸುದ್ದಿ ಇದೀಗ ಅಭಿಮಾನಿಗಳ ಕಾತರವನ್ನು ಇಮ್ಮಡಿಗೊಳಿಸಿದೆ.

ಈಗಾಗಲೇ ರಾಬರ್ಟ್ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಹಾಡುಗಳ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಇಲ್ಲಿಯವರೆಗೆ ‘ರಾಬರ್ಟ್‘ ಸಿನಿಮಾದಲ್ಲಿ ದರ್ಶನ್ ಅವರ ಪಾತ್ರದ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೀಗ ದರ್ಶನ್ ಅವರು ರಾಬರ್ಟ್ ಸಿನಿಮಾದಲ್ಲಿ ಮೂರು ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಎಂದು ಡಿ‘ಬಾಸ್‘ ಫ್ಯಾನ್ಸ್ ಮಾಹಿತಿಯನ್ನು ಶೇರ್ ಮಾಡಿದ್ದಾರೆ. ದರ್ಶನ್ ಅವರು ರಾಬರ್ಟ್, ಸಂಜಯ್, ಅಕ್ಬರ್ ಹೆಸರಿನಲ್ಲಿ ಕಾಣಿಸಲಿದ್ದಾರಂತೆ.

ಇನ್ನು ಚಿತ್ರದ ಟೈಟಲ್ ಹೇಳುವಂತೆ ರಾಬರ್ಟ್​ ಸಿನಿಮಾದದಲ್ಲಿ ದರ್ಶನ್ ಕ್ರಿಶ್ಚಿಯನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಹಿಂದೆ ಬಿಡುಗಡೆ ಮಾಡಿರುವ ಪೋಸ್ಟರ್ ಒಂದರಲ್ಲಿ ಆಂಜನೇಯ ಭುಜದ ಮೇಲೆ ರಾಮ ಕೂಳಿತಿರುವ ಫೋಟೋ ಕೂಡ ಗಮನ ಸೆಳೆದಿತ್ತು. ಇನ್ನು ಕೆಲ ತಿಂಗಳ ಹಿಂದೆ ರಾಬರ್ಟ್ ಚಿತ್ರತಂಡ ವಾರಾಣಾಸಿಗೆ ಹೋಗಿ, ಶೂಟಿಂಗ್ ಮುಗಿಸಿಕೊಂಡು ಬಂದಿದೆ. ಹೀಗಾಗಿ ರಾಬರ್ಟ್ ಸಿನಿಮಾದಲ್ಲಿ ದರ್ಶನ್ ತ್ರಿಪಾತ್ರದಲ್ಲಿ ನಟಿಸುತ್ತಿರುವುದು ನಿಜ ಎಂಬ ಮಾತೂ ಕೇಳಿಬಂದಿದೆ.

ಒಟ್ಟಾರೆ ದರ್ಶನ್ ಅವರ ‘ರಾಬರ್ಟ್‘ ಸಿನಿಮಾದ ಪಾತ್ರಗಳ ಬಗ್ಗೆ ಸಂಕ್ರಾಂತಿಯಂದು ಉತ್ತರ ಸಿಗುವ ನಿರೀಕ್ಷೆಯಿದೆ. ಕಾರಣ ಅಂದು ಚಿತ್ರದ ಎರಡನೇ ಮೋಷನ್ ಪೋಸ್ಟರ್ ಬಿಡುಗಡೆಯಾಗಲಿದೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button