ಉತ್ತರಾಖಂಡ್ ಕಾಡಿಗೆ ಹೊರಟ ಚಾಲೇಂಜಿಂಗ್ ಸ್ಟಾರ್

ಡೆಹ್ರಾಡೂನ್: ಚಾಲೇಂಜಿಂಗ್ ಸ್ಟಾರ್ ದರ್ಶನ್ ಹಾಗೂ ಟೀಂ ಮತ್ತೆ ಕಾಡಿನತ್ತ ಮುಖಮಾಡಿದ್ದು, ಈ ಬಾರಿ ಉತ್ತರಾಖಂಡ್‍ನ ಸತ್ತಲ್ ಫಾರೆಸ್ಟ್ ನಲ್ಲಿ ವನ್ಯಜೀವಿಗಳ ಛಾಯಾಗ್ರಹಣ ಮಾಡಲಿದೆ.

ಹೌದು. ಇತ್ತೀಚೆಗಷ್ಟೇ ಕೀನ್ಯಾ ಕಾಡಿನಲ್ಲಿ ವೈಲ್ಡ್‌ಲೈಫ್‌ ಫೋಟೋಗಳನ್ನು ಸೆರೆಹಿಡಿದಿದ್ದ ದರ್ಶನ್ ಈಗ ಉತ್ತರಾಖಂದದ ಕಾಡಿನತ್ತ ಕ್ಯಾಮರಾ ಹಿಡಿದು ಹೊರಟಿದ್ದಾರೆ. ದೊಡ್ಡ ಕ್ಯಾಮೆರಾ ಹೆಗಲಿಗೆ ಹಾಕೊಂಡು ವೈಲ್ಡ್‌ಲೈಫ್‌ ಫೋಟೋಗ್ರಾಫರ್ ಟೀಂ ಜೊತೆ ಕಲ್ಲು, ಬಂಡೆಯ ನಡುವೆ ಸಾಗಿ ಕಾಡು ಸುತ್ತಿದ್ದಾರೆ. ಆ ದಟ್ಟಕಾಡಿನಲ್ಲಿ ದಾಸ ಮಾಡಿರುವ ಸಾಹಸಮಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Related Articles

ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಸಿನಿಮಾ ಕೆಲಸದ ಜೊತೆಗೆ ವೈಲ್ಡ್‌ಲೈಫ್‌ ಫೋಟೋಗ್ರಾಫಿಯನ್ನು ಇಷ್ಟಪಡುತ್ತಾರೆ. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲಾ ಹೆಗಲಿಗೆ ಕ್ಯಾಮರಾ ಏರಿಸಿಕೊಂಡು ಬಂಡಿಪುರ, ಕಬಿನಿ ಹಿನ್ನೀರು ಸುತ್ತಮುತ್ತದ ಕಾಡಿನ ಕಡೆಗೆ ಸಾರಥಿ ಹೋಗುತ್ತಾರೆ.

ಅಷ್ಟೇ ಅಲ್ಲದೆ ಈ ಬಾರಿ ಕೂಡ ದರ್ಶನ್ ತೆಗೆದ ಫೋಟೋಗಳು ಪ್ರದರ್ಶನಗೊಳ್ಳಲಿದೆ. ಚಾಲೆಂಜಿಂಗ್ ಸ್ಟಾರ್ ನ ಕೈಚಳಕದಲ್ಲಿ ಮೂಡಿ ಬಂದ ಫೋಟೋ ಖರೀದಿಸಲು ಕಲಾವಿದರು ಸೇರಿದಂತೆ ಡಿ ಬಾಸ್ ಫ್ಯಾನ್ಸ್ ಕಾದು ಕುಳಿತಿದ್ದಾರೆ.

Home add -Advt

 

Related Articles

Back to top button