Latest

ಮಸೀದಿಯಲ್ಲಿ ಬಾಂಬ್ ಸ್ಫೋಟ; 40ಕ್ಕೂ ಹೆಚ್ಚು ಜನ ಸಾವು

ಪ್ರಗತಿವಾಹಿನಿ ಸುದ್ದಿ; ಪೇಶಾವರ: ಮಸೀದಿಯೊಂದರಲ್ಲಿ ಪ್ರಾರ್ಥನೆ ವೇಳೆ ಸಂಭವಿಸಿದ ಭೀಕರ ಬಾಂಬ್ ಸ್ಫೋಟದಲ್ಲಿ 40ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 50 ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಪೇಶಾವರ್ ನಲ್ಲಿ ನಡೆದಿದೆ.

ಪೇಶಾವರ ನಗರ ಪೊಲೀಸ್ ಅಧಿಕಾರಿ ಇಜಾಜ್ ಅಹ್ಸಾನ್ ಮಾಹಿತಿ ಪ್ರಕಾರ ಇಬ್ಬರು ದಾಳಿಕೋರರು ಮಸೀದಿಗೆ ಪ್ರವೇಶಿಸಲು ಪ್ರಯತ್ನಿಸಿದ್ದರು. ತಡೆಯಲು ಹೋದ ಪೊಲೀಸರ ಮೇಲೂ ದಾಳಿ ನಡೆಸಲಾಗಿದ್ದು, ಓರ್ವ ಪೊಲೀಸ್ ಸಿಬ್ಬಂದಿ ಕೂಡ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಯ ನಂತರ ಮಸೀದಿಯೊಳಗೆ ಸ್ಫೋಟ ಸಂಭವಿಸಿದೆ ಎಂದು ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.

Home add -Advt

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿಯೂ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಪೇಶಾವರದ ಲೇಡಿ ರೀಡಿಂಗ್ ಆಸ್ಪತ್ರೆ ವಕ್ತಾರರು ತಿಳಿಸಿದ್ದಾರೆ.

ಉಕ್ರೇನ್ ಪರಮಾಣು ವಿದ್ಯುತ್ ಸ್ಥಾವರದ ಮೆಲೆ ರಷ್ಯಾ ದಾಳಿ; ಸ್ಫೋಟದ ತೀವ್ರತೆಗೆ ಹೊತ್ತಿಕೊಂಡ ಬೆಂಕಿ

Related Articles

Back to top button