
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್ ಖ್ಯಾತ ನಿರ್ಮಾಪಕ ಆನೇಕಲ್ ಬಾಲರಾಜ್ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದಾರೆ.
’ಕರಿಯ’ ಸಿನಿಮಾ ನಿರ್ಮಾಣ ಮಾಡಿ ಯಶಸ್ಸು ಕಂಡಿದ್ದ ಆನೇಕಲ್ ಬಾಲರಾಜ್, ಜೆ.ಪಿ.ನಗರದ ತಮ್ಮ ನಿವಾಸದ ಬಳಿ ಬೆಳಿಗ್ಗೆ ವಾಕಿಂಗ್ ತೆರಳಿದ್ದಾಗ ಅಪಘಾತಕ್ಕೀಡಾಗಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ವಾಕಿಂಗ್ ಹೋಗಿದ್ದಾಗ ವಾಹನವೊಂಡು ಡಿಕ್ಕಿ ಹೊಡೆದ ಪರಿಣಾಮ ಫುಟ್ ಪಾತ್ ಮೇಲೆ ಬಿದ್ದಿದ್ದರು. ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಕರಿಯ ಚಿತ್ರದಿಂದ ಜನಪ್ರಿಯ ನಿರ್ಮಾಪಕರಾಗಿದ್ದ ಬಾಲರಾಜ್ ಬಳಿಕ ಹಲವು ಚಿತ್ರಗಳನ್ನು ನಿರ್ಮಿಸಿದ್ದರು. ತಮ್ಮ ಮಗ ಸಂತೋಷ್ ನಟನೆಯ ಕರಿಯ-2 ಹಾಗೂ ಗಣಪ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.
ವಾಹನ ಚಾಲನೆ ವೇಳೆಯೇ ಮೂರ್ಛೆ ಹೋದ ಟೆಂಪೋ ಚಾಲಕ; ಮುಂದೇನಾಯ್ತು?