ಅಭಿಮಾನಿಗಳ ಬಳಿ ಕ್ಷಮೆ ಕೇಳಿದ ರಾಧಿಕಾ ಪಂಡಿತ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇಂದು ಸ್ಯಾಂಡಲ್‍ವುಡ್ ಸಿಂಡ್ರೆಲಾ ರಾಧಿಕಾ ಪಂಡಿತ್ ಗೆ 36ನೇ ಹುಟ್ಟುಹಬ್ಬದ ಸಂಭ್ರಮ. ಆದರೆ ಈ ಬಾರಿಯೂ ರಾಧಿಕಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ವಿಡಿಯೋವೊಂದನ್ನು ಪೋಸ್ಟ್ ಮಾಡಿ ಅಭಿಮಾನಿಗಳ ಬಳಿ ಕ್ಷಮೆ ಕೇಳಿದ್ದಾರೆ.

ಪ್ರತಿ ವರ್ಷ ನನ್ನ ಹುಟ್ಟುಹಬ್ಬದ ದಿನ ಬೇರೆ ಬೇರೆ ಜಾಗ, ಊರುಗಳಿಂದ ನನ್ನನ್ನು ಭೇಟಿ ಮಾಡಿ ವಿಶ್ ಮಾಡಲು ಬರುತ್ತೀರಾ ಎಂದು ನನಗೆ ಗೊತ್ತು. ಕಳೆದ ವರ್ಷ ಕೂಡ ಮಿಸ್ ಆಯ್ತು. ಈ ವರ್ಷ ದಯವಿಟ್ಟು ಯಾರೂ ಬೇಜಾರು ಮಾಡಿಕೊಳ್ಳಬೇಡಿ, ಬೈಕೋಬೇಡಿ. ಈ ವರ್ಷ ಕೂಡ ನಾನು ನನ್ನ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಏಕೆಂದರೆ ನನಗೆ ಇಬ್ಬರು ಪುಟಾಣಿ ಮಕ್ಕಳಿದ್ದಾರೆ. ಹಾಗಾಗಿ ಈ ವರ್ಷ ಹುಟ್ಟುಹಬ್ಬ ಆಚರಿಸುವುದು ಸ್ವಲ್ಪ ಕಷ್ಟ.

Related Articles

ನಾನು ಈ ವಿಡಿಯೋ ಏಕೆ ಮಾಡುತ್ತಿದ್ದೇನೆ ಎಂದರೆ, ನನ್ನ ಹುಟ್ಟುಹಬ್ಬದಂದು ದೂರದ ಊರಿನಿಂದ ಅಭಿಮಾನಿಗಳು ಬರುತ್ತಾರೆ. ಈ ಬಾರಿ ಕೂಡ ಅವರು ಬಂದು ನಿರಾಸೆ ಆಗುವುದು ನನಗೆ ಇಷ್ಟ ಇಲ್ಲ. ಹಾಗಾಗಿ ನಾನು ಈ ವಿಡಿಯೋ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡುತ್ತಿದ್ದೇನೆ. ನಿಮ್ಮಲ್ಲರ ಪ್ರೀತಿ ಹಾಗೂ ಆಶೀರ್ವಾದ ನನ್ನ ಕುಟುಂಬಕ್ಕೆ ಸದಾ ಹೀಗೆ ಇರಲಿ. ಆದಷ್ಟು ಬೇಗ ಸಿಗೋಣ ಎಂದು ರಾಧಿಕಾ ವಿಡಿಯೋದಲ್ಲಿ ಹೇಳಿದ್ದಾರೆ.

ಇನ್ನು ನಟ ಯಶ್ ಕೂಡ ನಿನ್ನೆ ಈ ಬಾರಿ ರಾಧಿಕಾ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ. ನಮ್ಮ ಮನೆಯಲ್ಲಿ ಈಗ ಮಕ್ಕಳಿರುವುದರಿಂದ ಹಾಗೂ ಎಲ್ಲ ಕಡೆ ಕೊರೊನಾ ವೈರಸ್ ಹರಡುತ್ತಿರುವ ಕಾರಣ ತುಂಬಾ ಜನ ಸೇರುವುದು ಬೇಡ. ಈ ಬಾರಿ ಯಾವುದೇ ಆಚರಣೆ ಇಲ್ಲ ಎಂದಿದ್ದಾರೆ.

Home add -Advt

Related Articles

Back to top button