ವಿನಯ್ ಗುರೂಜಿಗೆ ಬ್ಲ್ಯಾಕ್ ಮೇಲ್: ಐವರ ಬಂಧನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಡಿಯೋ ಮೂಲಕ ವಿನಯ್ ಗುರೂಜಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.

ರವಿಕುಮಾರ್, ಮುನಿರಾಜು, ಮನೋಜ್, ಮುರಳಿ, ಸಂತೋಷ್ ಬಂಧಿತರು. ಈ ಐವರು ವಿನಯ್ ಗುರೂಜಿಯ ಹಳೆ ವಿಡಿಯೋ ಇಟ್ಟುಕೊಂಡು, ಯೂಟ್ಯೂಬ್ ನಲ್ಲಿ ಅಪ್‍ಲೋಡ್ ಮಾಡಿ ಬೆದರಿಕೆ ಹಾಕುತ್ತಿದ್ದರು. ಇದೀಗ ನಾಲ್ವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Home add -Advt

ಕೆಲ ವಿಡಿಯೋ ಎಡಿಟ್ ಮಾಡಿ, ಯೂಟ್ಯೂಬ್‍ ಚಾನಲ್ ಗೆ ಅಪ್‍ಲೋಡ್ ಮಾಡಿದ್ದರಲ್ಲದೇ ವಿಡಿಯೋ ಅಪ್ ಲೋಡ್ ಮಾಡಬಾರದೆಂದರೆ 30 ಲಕ್ಷ ರೂ. ನೀಡುವಂತೆ ವಿನಯ್ ಗುರೂಜಿ ಬಳಿ ಬೇಡಿಕೆ ಇಟ್ಟಿದ್ದರು.

ಈ ಕುರಿತು ವಿನಯ್ ಗುರೂಜಿ ಆಪ್ತ ಪ್ರಶಾಂತ್ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

 

Related Articles

Back to top button