Film & EntertainmentKannada NewsKarnataka NewsLatest

*ಪಿ ಲಂಕೇಶ್ ಮೊಮ್ಮಗ ಸಮರ್ಜಿತ್ ಸಿನಿಮಾರಂಗಕ್ಕೆ ಎಂಟ್ರಿ: ಮಗನ ಚಿತ್ರಕ್ಕೆ ಇಂದ್ರಜಿತ್ ಆಕ್ಷನ್ ಕಟ್*

ಸ್ಯಾಂಡಲ್‌ವುಡ್‌ಗೆ ಮತ್ತೋರ್ವ ಹೀರೋ ಎಂಟ್ರಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್ ವುಡ್‌ಗೆ ಹೊಸ ಹೀರೋನ ಪದಾರ್ಪಣೆ ಆಗಿದೆ. ಖ್ಯಾತ ಬರಹಗಾರ ಪಿ ಲಂಕೇಶ್ ಕುಟುಂಬದ ಮೂರನೇ ಕುಡಿ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಸಿನಿಮಾರಂಗಕ್ಕೆ ಅದ್ದೂರಿ ಎಂಟ್ರಿ ಕೊಟ್ಟಿದ್ದಾರೆ. ಸಮರ್ಜಿತ್ ಮೊದಲ ಸಿನಿಮಾಗೆ ‘ಗೌರಿ’ ಎಂದು ಟೈಟಲ್ ಇಡಲಾಗಿದೆ. ಬೆಂಗಳೂರಿನ ಬುಲ್ ಟೆಂಪಲ್ ರಸ್ತೆಯಲ್ಲಿರುವ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಅದ್ದೂರಿ ಪೂಜೆ ಮೂಲಕ ಗೌರಿ ಸಿನಿಮಾಗೆ ಚಾಲನೆ ಸಿಕ್ಕಿದೆ.

ಮುಹೂರ್ತ ಸಮಾರಂಭಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮಿಜಿ ಭೇಟಿ ನೀಡಿ ಸಮರ್ಜಿತ್‌ಗೆ ಆಶೀರ್ವದಿಸಿದರು.

Home add -Advt

ಗೌರಿ ಚಿತ್ರಕ್ಕೆ ಇಂದ್ರಜಿತ್ ಲಂಕೇಶ್ ಅವರೇ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮಗನ ಚೊಚ್ಚಲ ಸಿನಿಮಾಗೆ ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಈ ಮೂಲಕ ಇಂದ್ರಜಿತ್ ಲಂಕೇಶ್ ಪತ್ನಿ ಅರ್ಪಿತಾ ನಿರ್ಮಾಪಕಿಯಾಗಿ ಮಗನ ಜೊತೆಯೇ ಸ್ಯಾಂಡಲ್ ವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಮೂಲಕ ತಮ್ಮ ಮಗನನ್ನು ತಾವೇ ಬಣ್ಣದ ಲೋಕಕ್ಕೆ ಪರಿಚಯಿಸುತ್ತಿದ್ದಾರೆ ಇಂದ್ರಜಿತ್ ದಂಪತಿ.

ಗೌರಿ ಸಿನಿಮಾಗಾಗಿ ಸಮರ್ಜಿತ್ ಸಿಕ್ಕಾಪಟ್ಟೆ ತಯಾರಿ ಮಾಡಿಕೊಂಡಿದ್ದಾರೆ. ಆಗಲೇ ಆಕ್ಟಿಂಗ್, ಸ್ಟಂಟ್ ಕಲಿತು ಎಲ್ಲಾ ರೀತಿಯ ತಯಾರಿ ಮಡಿಕೊಂಡೆ ಕ್ಯಾಮರಾ ಎದುರಿಸುತ್ತಿದ್ದಾರೆ. ಸಮರ್ಜಿತ್ ಮೊದಲ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಕಿರುತೆರೆ ಹಾಗೂ ಬಿಗ್ ಬಾಸ್ ಖ್ಯಾತಿಯ ಸಾನ್ಯಾ ಐಯ್ಯರ್. ಅಂದಹಾಗೆ ಸಾನ್ಯಾ‌ಗೂ ಮೊದಲ ಸಿನಿಮಾ. ಚೊಚ್ಚಲ ಸಿನಿಮಾ ಮೂಲಕ ಸಮರ್ಜಿತ್ ಮತ್ತು ಸಾನ್ಯಾ ಇಬ್ಬರೂ ದೊಡ್ಡ ಪರದೆ ಮೇಲೆ ಮಿಂಚಲು ಸಜ್ಜಾಗಿದ್ದಾರೆ.

ಅದ್ದೂರಿ ಮೂಹೂರ್ತದ ಮೂಲಕ ಸದ್ದು ಮಾಡಿರುವ ಗೌರಿ ಸಿನಿಮಾ ಸದ್ಯದಲ್ಲೇ ಶೂಟಿಂಗ್‌ಗೆ ಹೊರಡುತ್ತಿದೆ. ಮೊದಲ ಹಂತದ ಚಿತ್ರೀಕರಣ ಚಿಕ್ಕಮಗಳೂರಿನಲ್ಲಿ ನಡೆಸಲು ಸಿನಿಮಾತಂಡ ಪ್ಲಾನ್ ಮಾಡಿದೆ. ಇನ್ನೂ ಸಿನಿಮಾದಲ್ಲಿ ಕಾಂತಾರ ಸಿನಿಮಾ ಖ್ಯಾತಿಯ ನಟಿ ಮಾನಸಿ ಸುಧೀರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ಸಿನಿಮಾಗಿದೆ. ಈಗಾಗಲೇ ಫೋಟೋಶೂಟ್ ಹಾಗೂ ಲುಕ್ ಮೂಲಕ ಗಮನ ಸೆಳೆದಿರುವ ಸಮರ್ಜಿತ್ ಗೌರಿ ಸಿನಿಮಾ ಮೂಲಕ ಪ್ರೇಕ್ಷಕರ ಹೃದಯ ಗೆಲ್ಲುತ್ತಾರಾ ಕಾದುನೋಡಬೇಕಿದೆ.

Related Articles

Back to top button