Belagavi NewsBelgaum News
*ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಹಾಗೂ ಬೀರೇಶ್ವರ ಸಮುದಾಯ ಭವನ ಉದ್ಘಾಟನೆ ನೆರವೇರಿಸಿದ ಮೃಣಾಲ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾಂಬ್ರಾ ಗ್ರಾಮದ ಶ್ರೀ ಬೀರೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಗ್ರಾಮದಲ್ಲಿ ನೂತನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಹಾಗೂ ಬೀರೇಶ್ವರ ಸಮುದಾಯ ಭವನ ಉದ್ಘಾಟನೆ ನೆರವೇರಿಸಿದರು.

ಈ ವೇಳೆ ಬೆಂಗಳೂರು ಹಡಗಿನಾಳದ ತಪೋನಿಧಿ ಮುತ್ತೇಶ್ವರ ಮಹಾಸ್ವಾಮಿಗಳು, ಕಲ್ಲಪ್ಪ ಪಾಲ್ಕರ್, ನಾಗೇಶ್ ದೇಸಾಯಿ, ಪಿಡಿಓ ಸಿದ್ದಲಿಂಗಪ್ಲ ಸರೂರ್, ಗುರುಲಿಂಗಪ್ಪ ಪಟ್ಟಣ, ಸದು ಪಾಟೀಲ, ಗಂಗಾಧರ್ ಕೊಳೆಪ್ಪಗೋಳ, ಲಕ್ಷ್ಮಣ ಕೊಳೆಪ್ಪಗೋಳ, ನಿಂಗಪ್ಪ ಕೊಳೆಪ್ಪಗೋಳ, ನಿಲೇಶ್ ಚಂದಗಡ್ಕರ್, ಪಿಂಟು ಮಲ್ಲವ್ವಗೋಳ, ರಾಯಣ್ಣ ಬ್ರಿಗೇಡ್ ನ ಯುವಕರು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ