
೧೯೯೪ರಲ್ಲಿ ಬಿಡುಗಡೆಯಾದ ಅಕ್ಷಯ್ ಅವರ ಮೊಹ್ರಾ ಸಿನೇಮಾದ ಕಾಲದಿಂದಲೇ ನಾನು ಅಕ್ಷಯ್ ಕುಮಾರ್ ಅವರನ್ನು ಇಷ್ಟಪಟ್ಟಿದ್ದೇನೆ. ಯಾರೂ ಅಕ್ಷಯ್‌ನನ್ನು ಇಷ್ಟಪಡದಿದ್ದ ಕಾಲದಿಂದಲೂ ನಾನು ಅಕ್ಷಯ್‌ನನ್ನು ಇಷ್ಟಪಟ್ಟಿದ್ದೇನೆ. ಹಾಗಾಗಿ ಆಯ್ಕೆಯ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವೇ ಇಲ್ಲ
– ಸಾನಿಯಾ ಮಿರ್ಜಾ
ಪ್ರಗತಿ ವಾಹಿನಿ ಸುದ್ದಿ, ನವದೆಹಲಿ – ಮೂಗುತಿ ಸುಂದರಿ ಖ್ಯಾತಿಯ ಹೈದರಾಬಾದ್ ಮೂಲದ ಟೆನ್ನಿಸ್ ತಾರೆ ಹಾಗೂ ಪಾಕಿಸ್ತಾನ ಕ್ರಿಕೇಟ್ ತಂಡದ ಮಾಜಿ ನಾಯಕ ಶೋಯೆಬ್ ಮಲ್ಲಿಕ್ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದಾರೆ.
ಇವರಿಬ್ಬರ ನಡುವೆ ಪ್ರೀತಿಯುಂಟಾಗಿ ಬಳಿಕ ೨೦೧೦ರಲ್ಲಿ, ಹೈದರಾಬಾದ್‌ನ ತಾಜ್ ಕೃಷ್ಣ ಹೋಟೆಲ್‌ನಲ್ಲಿ ಸಾನಿಯಾ ಮತ್ತು ಶೋಯೆಬ್ ಸಾಂಪ್ರದಾಯಿಕ ಮುಸ್ಲಿಂ ವಿವಾಹ ಪದ್ಧತಿಯಲ್ಲಿ ಮದುವೆ ಮಾಡಿಕೊಂಡರು.
ಶೋಯೆಬ್ ಮತ್ತು ಸಾನಿಯಾ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಪ್ರೀತಿಯ ಕುರಿತು ಆಗಾಗ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್‌ಗಳನ್ನೂ ಹೊಂದಿದ್ದಾರೆ.
ಇದೇ ರೀತಿ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಶೋಯೆಬ್ ಅವರು ಸಾನಿಯಾ ಅವರ ಸಂದರ್ಶನದ ವಿಶೇಷ ಲೈವ್ ಸೆಷನ್ ನಡೆಸಿದರು. ಅದರಲ್ಲಿ ಒಂದು ಪ್ರಶ್ನೆ ಕೇಳಿದ ಶೋಯೆಬ್, ಸಾನಿಯಾಗೆ ಬಾಲಿವುಡ್ ಸೂಪರ್‌ಸ್ಟಾರ್ ಅಕ್ಷಯ್ ಕುಮಾರ್ ಮತ್ತು ಹಾಲಿವುಡ್ ಸ್ಟಾರ್ ಟಾಮ್ ಕ್ರೂಸ್ ನಡುವೆ ಯಾರಾದರೊಬ್ಬರನ್ನು ಆಯ್ಕೆ ಮಾಡಲು ಕೇಳಿದರು. ಸಂದರ್ಶನದ ಸಮಯದಲ್ಲಿ, ಮಲಿಕ್ ಸಾನಿಯಾಗೆ ಯಾರನ್ನು ಬಿಡಲು ಮತ್ತು ಯಾರನ್ನು ಮದುವೆಯಾಗಲು ಬಯಸುತ್ತೀರಿ ಎಂದು ಕೇಳಿದರು.
ಅರೆ ಕ್ಷಣವೂ ವಿಚಾರ ಮಾಡದೆ ಸಾನಿಯಾ ಅಕ್ಷಯ್ ಅವರನ್ನು ಮದುವೆಯಾಗಲು ಮತ್ತು ಹಾಲಿವುಡ್ ಸೂಪರ್ ಸ್ಟಾರ್ ಟಾಮ್ ಕ್ರೂಸ್ ನನ್ನು ಬಿಡಲು ಇಚ್ಛಿಸುತ್ತೇನೆ ಎಂದು ಉತ್ತರಿಸಿದ್ದಾರೆ. ಅಲ್ಲದೆ, ಅಕ್ಷಯ್ ಕುಮಾರ್ ಅವರ ದೀರ್ಘ ಕಾಲದ ಅಭಿಮಾನಿ ಎಂದು ತಿಳಿಸಿದ್ದಾರೆ.
೧೯೯೪ರಲ್ಲಿ ಬಿಡುಗಡೆಯಾದ ಅಕ್ಷಯ್ ಅವರ ಮೊಹ್ರಾ ಸಿನೇಮಾದ ಕಾಲದಿಂದಲೇ ನಾನು ಅಕ್ಷಯ್ ಕುಮಾರ್ ಅವರನ್ನು ಇಷ್ಟಪಟ್ಟಿದ್ದೇನೆ. ಯಾರೂ ಅಕ್ಷಯ್‌ನನ್ನು ಇಷ್ಟಪಡದಿದ್ದ ಕಾಲದಿಂದಲೂ ನಾನು ಅಕ್ಷಯ್‌ನನ್ನು ಇಷ್ಟಪಟ್ಟಿದ್ದೇನೆ. ಹಾಗಾಗಿ ಆಯ್ಕೆಯ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವೇ ಇಲ್ಲ ಎಂದು ಸಾನಿಯಾ ಹೇಳಿದ್ದಾರೆ.
ನಿವೃತ್ತಿ ಘೋಷಿಸಿದ ಸಾನಿಯಾ ಮಿರ್ಜಾ; ಕಾರಣ ಬಿಚ್ಚಿಟ್ಟ ಮೂಗುತಿ ಸುಂದರಿ
೧೯೯೪ರಲ್ಲಿ ಬಿಡುಗಡೆಯಾದ ಅಕ್ಷಯ್ ಅವರ ಮೊಹ್ರಾ ಸಿನೇಮಾದ ಕಾಲದಿಂದಲೇ ನಾನು ಅಕ್ಷಯ್ ಕುಮಾರ್ ಅವರನ್ನು ಇಷ್ಟಪಟ್ಟಿದ್ದೇನೆ. ಯಾರೂ ಅಕ್ಷಯ್‌ನನ್ನು ಇಷ್ಟಪಡದಿದ್ದ ಕಾಲದಿಂದಲೂ ನಾನು ಅಕ್ಷಯ್‌ನನ್ನು ಇಷ್ಟಪಟ್ಟಿದ್ದೇನೆ. ಹಾಗಾಗಿ ಆಯ್ಕೆಯ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವೇ ಇಲ್ಲ



