Kannada NewsLatest

2005 ರ ಪ್ರವಾಹದ ಸಂದರ್ಭದಲ್ಲಿ ಸಾವಿರಾರು ಜನರ ಪ್ರಾಣ ಉಳಿಸಿದ್ದ ಸಂಜಿವ ಒಡೆಯರ್

2005 ರ ಪ್ರವಾಹದ ಸಂದರ್ಭದಲ್ಲಿ ಸಾವಿರಾರು ಜನರ ಪ್ರಾಣ ಉಳಿಸಿದ್ದ ಸಂಜಿವ ಒಡೆಯರ್.

ಪ್ರಗತಿವಾಹಿನಿ ಸುದ್ದಿ : ಅಥಣಿ – 2005 ರಲ್ಲಿಯು ಸಹ ಇದೆ ರೀತಿ ನದಿಗಳು ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ಎದುರಾಗಿತ್ತು, ಆಗ ತಾಲೂಕಿನ ಇಡೀ ಹಳ್ಳಿಗೆ ಹಳ್ಳಿಗಳೇ ನೀರಿನಲ್ಲಿ ಸಿಲುಕಿ ಹಾಕಿಕೊಂಡು ಸಾವಿನ ಭಯದಲ್ಲಿ ಇದ್ದವು, ಆ ವೇಳೆ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಸಂಜೀವ ಒಡೆಯರ್(ಕಾಳಗಿ) ಅವರು ಪ್ರವಾಹದ ನೀರಿನಲ್ಲೇ ನದಿಯಲ್ಲಿ ಧುಮುಕಿ ಸಾಕಷ್ಟು ಗ್ರಾಮಗಳಿಂದ ಜನರನ್ನ ಪ್ರವಾಹದಿಂದ ಕಾಪಾಡಿದ್ದರು.

ನಂತರ ಸರಕಾರ ಅವರ ಧೈರ್ಯ ಹಾಗೂ ಸಾಧನೆಗೆ ಮೆಚ್ಚಿ ರಾಷ್ಟ್ರಪತಿ ಪ್ರಶಸ್ತಿ(ಜೀವನ ರಕ್ಷಾ)ಪ್ರಧಾನ ಮಾಡಿದರು ಆದರೆ ಅದಾದ ನಂತರ ಅವರನ್ನು ಸರಕಾರ ಹಾಗೂ ತಾಲೂಕಾಡಳಿತದ ವತಿಯಿಂದ ನಡೆಸುವ ಯಾವುದೇ ಸಭೆ ಸಮಾರಂಭಗಳಿಗೆ ಆಹ್ವಾನಿಸದಿರುವುದು ದುರಂತವಾಗಿದೆ.

ಕಳೆದ 2005 ರಲ್ಲಿ ಪ್ರವಾಹದಲ್ಲಿ ಸುಮಾರು 22 ದಿನಗಳು ಪ್ರವಾಹ ನದಿ ನೀರಿನಲ್ಲಿ ನಿಂತು ಸಾವಿರಾರು ಜನರನ್ನ ಸಾವಿನಂದ ಪಾರು ಮಾಡಿದ್ದರು ಸಂಜೀವ ಅವರು. ಆಗಿನ ಪ್ರವಾಹದ ಸಮಯದಲ್ಲಿ ಯಾವುದೇ ಎನ್‍ಡಿಆರ್ಎಪ್ ಅಥವಾ ಎಸ್‍ಟಿಆರ್ಎಪ್ ಸೇವೆಗಳು ಸಮೀಪದಲ್ಲಿರಲಿಲ್ಲಾ.

ಆ ಸಮಯದಲ್ಲಿ ಪ್ರತಿಷ್ಟಿತ ಈಜು ಪಟುವಾದ ಇವರು ತಮ್ಮ ಜೀವದ ಹಂಗನ್ನ ಮರೆತು ತಾವೆ ಹಲವಾರು ಗ್ರಾಮಗಳಿಗೆ ಈಜಿನ ಮೂಲಕ ತಿರುಗಿ ತಾಲೂಕಾಡಳಿತಕ್ಕೆ ತಮ್ಮ ಈಜಿನ ಬಗ್ಗೆ ತಿಳಿಸಿದರು, ಕೆಲವು ದುರ್ಗಮ ಅಪಾಯದ ಸ್ಥಳದಲ್ಲಿ ಬೋಟ್ ಹೋಗದೆ ಇರುವಾಗ ತಾವೆ ಬೋಟಗಳನ್ನ ತಗೆದುಕೊಂಡು ಹೋಗಿ ಜನರನ್ನ ಅಪಾಯದಿಂದ ಪಾರು ಮಾಡಿದ್ದಂತಹ ಧೀರರಾಗಿದ್ದಾರೆ ಈ ಸಂಜೀವ ಅವರು.

ಆಗೀನ ಸಂದರ್ಭದಲ್ಲಿ ಸುಮಾರ 500 ರಿಂದ 700 ವರೆಗೂ ಜೀವಂತ ಜಾನುವಾರುಗಳನ್ನ ಹಾಗೂ ಪ್ರವಾಹದಲ್ಲಿ ಮುಳುಗಿ ಸತ್ತ ಜಾನುವಾರುಗಳನ್ನ ಪರಿಸರ ಮಾಲಿನ್ಯ ಕೆಡದಂತೆ ನದಿಯಿಂದ ಹೊರ ತಂದಿದ್ದಾರೆ, ಈ ಸಮಯದಲ್ಲಿ ಅವರ ಕಾರ್ಯವನ್ನ ನೋಡಿ ಹಲವಾರು ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ತಾಲೂಕಾಡಳಿತ ಅವರಿಗ ಶೌರ್ಯ ಪ್ರಶಸ್ತಿ ಮತ್ತು ರಾಷ್ಟ್ರಪತಿ ಪ್ರಶಸ್ತಿ ಪ್ರದಾನ ಮಾಡಲು ಅರ್ಹರಿದ್ದಾರೆಂದು ಶಿಫಾರಸ್ಸು ಮಾಡಿತ್ತು.

ಅದರಂತೆ ಮುಂದೆ ಸರಕಾರವು ಅವರಿಗೆ ರಾಷ್ಟ್ರಪತಿ ಪ್ರಶಸ್ತಿ ಪ್ರಧಾನ ಮಾಡಿತು, ಆದರೆ ಈ ಬಾರಿ ಪ್ರವಾಹ ಬಂದಾಗ ಅವರಿಗೆ ಯಾವುದೇ ಮಾಹಿತಿ ನೀಡದೆ ಅಥವಾ ಅವರನ್ನ ಉಪಯೋಗಿಸಕೊಳ್ಳದೇ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ನಿರ್ಲಕ್ಷ ತೋರಿದೆ ಎಂದು ಸಾರ್ವಜನಿಕರು ಅಬಿಪ್ರಾಯ ವ್ಯಕ್ತಪಡಿಸಿದರು.

2007 ರಲ್ಲಿ ಸಂಜೀವ ಒಡೆಯರ್ ಅವರಿಗೆ ರಾಷ್ಟ್ರಪತಿ ಪ್ರಶಸ್ತಿ ಸಿಕ್ಕರು ಸಹ ಇದುವರೆಗೂ ಸಹ ಅವರಿಗೆ ಜಿಲ್ಲಾಡಳಿತವಾಗಲಿ, ತಾಲೂಕಾಡಳಿತವಾಗಲಿ ಅವರನ್ನ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸುವುದಿಲ್ಲಾ ಹಾಗೂ ಕಾರ್ಯಕ್ರಮಗಳ ಬಗ್ಗೆ ಪೂರ್ವ ನೀಯೋಜಿತ ಚರ್ಚೆಗಳಿಗೆ ಯಾವುತ್ತು ಆಹ್ವಾನಿಸಿಲ್ಲವೆನ್ನುವುದು ಬೇಸರದ ಸಂಗತಿ .

ಅದಾದ ಕೆಲವು ದಿನಗಳ ನಂತರದಲ್ಲಿ ತಾಲೂಕಿನಲ್ಲಿ ಒಂದು ಶಾಲಾ ವಿದ್ಯಾರ್ಥಿಗಳ ವಾಹನವು ವಿದ್ಯಾರ್ಥಿಗಳೊಂದಿಗೆ ಬಾವಿಯಲ್ಲಿ ಬಿದ್ದ ಸಂದರ್ಭದಲ್ಲಿ ಪೋಲಿಸ್ ಇಲಾಖೆಯು ಸಂಜೀವ ಒಡೆಯರ್ ಅವರನ್ನ ಕರೆದುಕೊಂಡು ಹೋಗಿ ಹಲವು ವಿದ್ಯಾರ್ಥಿಗಳ ಜೀವವನ್ನ ಉಳಿಸಿದ್ದನ್ನು ಸಂಜೀವ ಅವರು ಸ್ಮರಿಸುತ್ತಾರೆ.

2005 ರಲ್ಲಿ ಬಂದ ಪ್ರವಾಹ ಪರಿಸ್ಥಿತಿಗಿಂತ ಅಥಣಿಯಲ್ಲಿ ಅದಕ್ಕಿಂತಲೂ ಹೆಚ್ಚಿಗೆ ಪ್ರವಾಹ ಬಂದಿದೆ, ಅದರಲ್ಲೂ ಅಥಣಿಗೆ ಹೋಲಿಸಿದರೆ ಗೋಕಾಕ ಇನ್ನಿತರ ಪ್ರದೇಶಗಳಲ್ಲಿ ಬಹಳ ಪ್ರಮಾಣದ ಹಾನಿಯಾಗಿದೆ ಅಂತಹ ಸಮಯದಲ್ಲಿ ನನ್ನನ್ನು ಅಹ್ವಾನಿಸಿದ್ದರೆ ನಾನು ಸ್ವಲ್ಪ ಜನರಿಗೆ ಸಹಾಯ ಮಾಡುತ್ತಿದ್ದೆ, ಆದರೆ ಯಾವಾಗಲೂ ನನ್ನನ್ನು ಮರೆಯುತ್ತಿರುವ ತಾಲೂಕಾಡಳಿತ ವೈಖರಿಯಿಂದ ನನಗೆ ಬೆಸರ ತಂದಿದೆ ಎಂದು ಅವರು ತಮ್ಮ ಅಳಲನ್ನು ತೋಡಿಕೊಂಡರು.

ಇನ್ನು ಮುಂದಾದರೂ ಸಂಜೀವ ಅವರನ್ನು ತಾಲೂಕಾಡಳಿತ ವಿವಿಧ ಕಾರ್ಯ ಹಾಗೂ ಸಭೆ ಸಮಾರಂಭಗಳಿಗೆ ಆಹ್ವಾನಿಸಿ ಅವರಿಗೆ ಗೌರವ ಸಲ್ಲಿಸುತ್ತಾ ಎಂದು ಕಾದು ನೋಡಬೇಕಿದೆ.///

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button