ಪ್ರಗತಿ ವಾಹಿನಿ ಸುದ್ದಿ, ಸಂಕೇಶ್ವರ:
ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತು ಮನೆಗಳಿಗೆ ಕನ್ನ ಹಾಕಿ ಕಳುವು ಮಾಡುತ್ತಿದ್ದ ಖತರ್ನಾಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಗೋಕಾಕದ ಮಹಾದೇವ ಮಾರುತಿ ಮುನ್ನೊಳಿ ಬಂಧಿತ ಆರೋಪಿ.
ಆರೋಪಿಯಿಂದ 4 ಪ್ರಕರಣಗಳಲ್ಲಿ ಕಳುವು ಮಾಡಲಾಗಿದ್ದ 1.50 ಲಕ್ಷ ರೂ. ಮೌಲ್ಯದ ಮೂರು ಎಳೆಯ ಬಂಗಾರದ ಸರ, 75 ಸಾವಿರ ರೂ. ಮೌಲ್ಯದ 15 ಗ್ರಾಂ ತೂಕದ ಬಂಗಾರ ಬ್ರೆಸ್‍ಲೆಟ್, 25 ಸಾವಿರ ಮೌಲ್ಯದ ಬಂಗಾರದ ಉಂಗುರ, 1.75 ಲಕ್ಷ ಮೌಲ್ಯದ 35 ಗ್ರಾಂ ತೂಕದ ಬಂಗಾರದ ನೆಕ್ಲೆಸ್, 4500 ರೂ. ನಗದು ಒಂದು ಟಿವಿ ಮತ್ತು ಸೆಟ್‍ಟಾಪ್ ಬಾಕ್ಸ್ ಸೇರಿದಂತೆ ಒಟ್ಟು 5 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಹಲವಾರು ದಿನಗಳಿಂದ ಸಂಕೇಶ್ವರ ಭಾಗದಲ್ಲಿ ರಾತ್ರಿ ವೇಳೆ ಮನೆಗಳಿಗೆ ಕನ್ನ ಹಾಕಿ ಕಳುವು ಮಾಡುತ್ತಿದ್ದ ಪ್ರಕರಣದ ಬೆನ್ನತ್ತಿದ ಪೊಲೀಸರು ಗೋಕಾಕ ಡಿವೈಎಸ್‍ಪಿ ಮಾರ್ಗದರ್ಶನದಲ್ಲಿ ಪಿಎಸ್‍ಐ ಎಸ್‍ಬಿ ನಾಯಿಕವಾಡಿ, ಸಿಬ್ಬಂದಿಯಾದ ಬಿ. ಕೆ. ನಾಗನೂರಿ, ಐ. ಬಿ. ಅಲಗರಾವತ ಮೊದಲಾದವರು ತಂಡ ರಚಿಸಿ ಕಾರ್ಯಾಚರಣೆ ನಡೆಸಿದ್ದರು.
ಹೊನ್ನಿಹಳ್ಳಿ ಕ್ರಾಸ್ ಹತ್ತಿರ ಸಂಶಯಾಸ್ಪದವಾಗಿ ಕಂಡುಬಂದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತನೇ ಕಳುವು ಮಾಡುತ್ತಿದ್ದ ವಿಷಯ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಕಲ್ಯಾಣ ಮಂಟಪ ನಿರ್ಮಾಣಕ್ಕೆ 50 ಲಕ್ಷ ಅನುದಾನ: ಸಚಿವೆ ಶಶಿಕಲಾ ಜೊಲ್ಲೆ
ಸಾಹಸಸಿಂಹನ ಸ್ಮಾರಕ ಲೋಕಾರ್ಪಣೆಗೆ ದಿನಗಣನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ