Karnataka NewsLatest

ಸಂತೋಷ್/ ಲಕ್ಷ್ಮಣ ಸವದಿ ಸಿಎಂ, ಬಿಎಸ್ವೈ ಉಪರಾಷ್ಟ್ರಪತಿ: ಕರ್ನಾಟಕ ರಾಜಕೀಯದಲ್ಲಿ ಹೀಗೊಂದು ಸುದ್ದಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾರತದ ಉಪರಾಷ್ಟ್ರಪತಿಯಾಗಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಅಥವಾ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮುಖ್ಯಮಂತ್ರಿಯಾಗಲಿದ್ದಾರೆ – ಕರ್ನಾಟಕದ ರಾಜಕೀಯದಲ್ಲಿ ಹರಿದಾಡುತ್ತಿರುವ ಹೊಸ ಸುದ್ದಿ ಇದು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಹೋಗಿಬಂದ ನಂತರ ಅವರನ್ನು ಮುಖ್ಯಮಂತ್ರಿ ಹುದ್ದಯಿಂದ ಬದಲಾಯಿಸುತ್ತಾರೆನ್ನುವ ಸುದ್ದಿ ಮತ್ತಷ್ಟು ಗಟ್ಟಿಯಾಗಿದೆ. ಜೊತೆಗೆ ನಳಿನ್ ಕುಮಾರ ಕಟಿಲು ಅವರ ಆಡಿಯೋ (ಅವರು ಫೇಕ್ ಎಂದಿದ್ದಾರೆ) ಇನ್ನಷ್ಟು ಸದ್ದು ಮಾಡಿದೆ.

ಯಡಿಯೂರಪ್ಪ ಅವರನ್ನು ಬದಲಾಯಿಸುವ ಸಿದ್ಧತೆ ನಡೆಯುತ್ತಿರುವುದು ಈಗ ಹಿಂದಿನಷ್ಟು ಅನುಮಾನವಾಗಿ ಉಳಿದಿಲ್ಲ. ಆದರೆ ಯಾವಾಗ ಮತ್ತು ಏಕೆ ಎನ್ನುವ ಪ್ರಶ್ನೆ ಹಾಗೆಯೇ ಉಳಿದಿದೆ.

ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರೆ ಮುನಿಸಿಕೊಳ್ಳಬಹುದಾದ ಅವರ ಅನುಯಾಯಿಗಳನ್ನು ಸಮಾಧಾನಪಡಿಸುವುದಕ್ಕೋಸ್ಕರ ಅವರಿಗೆ ಉಪರಾಷ್ಟ್ರಪತಿ ಖುರ್ಚಿ ತೋರಿಸಲಾಗಿದೆ ಎನ್ನುವ ಸುದ್ದಿ ದಟ್ಟವಾಗಿ ಹಬ್ಬಿದೆ.

ಹಾಗೆಯೇ ಮುಖ್ಯಮಂತ್ರಿ ಹುದ್ದೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ ಮತ್ತು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೆಸರು ಹೈಕಮಾಂಡ್ ಮನಸ್ಸಿನಲ್ಲಿದೆ ಎನ್ನುವ ಸುದ್ದಿ   ಹಬ್ಬಿದೆ.

ಈ ಹಿಂದಿನ ಸುದ್ದಿಗಳ ಪ್ರಕಾರ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಚಿವ ಮುರುಗೇಶ ನಿರಾಣಿ, ಶಾಸಕ ಅರವಿಂದ ಬೆಲ್ಲದ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮೊದಲಾದವರ ಹೆಸರು ಕೇಳಿ ಬಂದಿತ್ತು.

ಮುಖ್ಯಮಂತ್ರಿ ರೇಸ್ ನಲ್ಲಿ ನಾಲ್ವರ ಹೆಸರು ಮುನ್ನೆಲೆಗೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button