Belagavi NewsBelgaum NewsKannada NewsKarnataka News

*ಸರಗಳ್ಳನ ಬಂಧನ: 2 ಲಕ್ಷ ಮೌಲ್ಯದ ಮಂಗಳಸೂತ್ರ ವಶ*

ಪ್ರಗತಿವಾಹಿನಿ ಸುದ್ದಿ: ನಡೆದು ಹೋಗುತ್ತಿದ್ದ ಮಹಿಳೆಯ ಸರಗಳ್ಳತನ ಮಾಡಿದ ಕಳ್ಳನನ್ನು ಎಪಿಎಂಸಿ ಪೊಲೀಸರು 24 ಗಂಟೆಯೊಳಗೆ ಬಂಧಿಸಿ, ಕದ್ದಿದ್ದ ಮಂಗಳಸೂತ್ರವನ್ನು ವಶಕ್ಕೆ ಪಡೆದಿದ್ದಾರೆ.

ಮಾ 16.ರಂದು ಪ್ರೀತಿ ನಾರ್ವೇಕರ್ ಎಂಬ ಮಹಿಳೆ ಎಪಿಎಂಸಿ ಹತ್ತಿರದ ಸಾಯಂಕಾಲ 7.30ಕ್ಕೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಬಂದ ವ್ಯಕ್ತಿ ಕೊರಳಲ್ಲಿದ್ದ ಮಂಗಳಸೂತ್ರವನ್ನು ಕಿತ್ತುಕೊಂಡು ಹೋದ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 

ಈ ಬಗ್ಗೆ ತನಿಖೆ ಮಾಡಿ ಆರೋಪಿಯ ಜಾಡು ಹಿಡಿದ ಎಪಿಎಂಸಿ ಪೊಲೀಸರು ಸೋಮೇಶ ಲಕ್ಷ್ಮಣ ಶಂಭುಚೆ (37) ಕಂಗ್ರಾಳಗಲ್ಲಿ ಬೆಳಗಾವಿ ನಿವಾಸಿ ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.‌ 

Home add -Advt

ವಿಚಾರಣೆಗೊಳಪಡಿಸಿ ಆತನಿಂದ ಒಟ್ಟು ರೂ.2,12,400 ಮೌಲ್ಯದ ಬಂಗಾರದ ಮಂಗಳಸೂತ್ರವನ್ನು ವಶಪಡಿಸಿಕಪಳ್ಳಾಲಾಗಿದೆ.‌

ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ,ನ್ಯಾಯಾಂಗ ಬಂಧನಕ್ಕೆ ನೀಡಿ ಪ್ರಕರಣದ ತನಿಖೆ ಮುಂದುವರೆಸಲಾಗಿದೆ. ಆರೋಪಿಯನ್ನು ಪತ್ತೆ ಮಾಡಿ ಪ್ರಕರಣ ಬೆಳಕಿಗೆ ತಂದ ಎಪಿಎಂಸಿ ಪಿಐ ಹಾಗೂ ಅವರ ತಂಡವನ್ನು  ಪೋಲಿಸ್ ಆಯುಕ್ತರು ಹಾಗೂ ಡಿಸಿಪಿ ರವರಗಳು ಮೆಚ್ಚುಗೆ ವ್ಯಕ್ತ ಪಡಿಸಿರುತ್ತಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button