Cancer Hospital 2
Beereshwara 33
LaxmiTai 5

*ಅಪಘಾತದಲ್ಲಿ ನಟಿಯ ಸಾವು; ಮನನೊಂದು ಆತ್ಮಹತ್ಯೆಗೆ ಶರಣಾದ ಖ್ಯಾತ ನಟ*

Anvekar 3
GIT add 2024-1

ಪ್ರಗತಿವಾಹಿನಿ ಸುದ್ದಿ: ಕನ್ನಡ ಹಾಗೂ ತೆಲುಗು ಕಿರುತೆರೆ ಖ್ಯಾತ ನಟಿ ಪವಿತ್ರಾ ಜಯರಾಂ ನಾಲ್ಕು ದಿನಗಳ ಹಿಂದಷ್ಟೇ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಪವಿತ್ರಾ ಜಯರಾಂ ಸಾವಿನಿಂದ ಮನನೊಂದಿದ್ದ ನಟ, ಆಕೆ ಸ್ನೇಹಿತ ಚಂದ್ರಕಾಂತ್ ಹೈದರಾಬಾದ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪವಿತ್ರಾ ಜಯರಾಂ ಹಾಗೂ ನಟ ಚಂದ್ರಕಾಂತ್ ಬೆಂಗಳೂರಿನಿಂದ ಹೈದರಾಬಾದ್ ಗೆ ತೆರಳುತ್ತಿದ್ದಾಗ ಭೀಕರ ಅಪಘಾತದಲ್ಲಿ ಪವಿತ್ರಾ ಜಯರಾಂ ಮೃತಪಟ್ಟಿದ್ದರು. ಈ ವೇಳೆ ನಟ ಚಂದ್ರಕಾಂತ್ ಕೈ ಮುರಿದಿತ್ತು. ಮಂಡ್ಯ ಮೂಲದ ಪವಿತ್ರಾ ಜಯಯಾಂ ಅವರ ಅಂತ್ಯಕ್ರಿಯೆ ಮಂಡ್ಯದಲ್ಲಿ ನೆರವೇರಿತ್ತು. ನಟಿಯ ಅಂತ್ಯಕ್ರಿಯೆಯಲ್ಲಿಯೂ ಚಂದ್ರಕಾಂತ್ ಭಾಗಿಯಾಗಿದ್ದರು.

ಅಪಘಾತದ ದಿನದಿಂದಲೂ ತೀವ್ರವಾಗಿ ಮನನೊಂದಿದ್ದ ಚಂದ್ರಕಾಂತ್ ಈಗ ಹೈದರಾಬಾದ್ ನ ಮಣಿಕೊಂಡದಲ್ಲಿರುವ ಫ್ಲಾಟ್ ನಲ್ಲಿ ನೇಣಿಗೆ ಶರಣಾಗಿದ್ದಾರೆ.

Emergency Service

ನಟ ಚಂದ್ರಕಾಂತ್ ಕೂಡ ಪವಿತ್ರಾ ಜಯರಾಂ ನಟಿಸುತ್ತಿದ್ದ ತೆಲುಗಿನ ತ್ರಿನಯನಿ ಧಾರವಾಹಿಯಲ್ಲಿ ನಟಿಸುತ್ತಿದ್ದರು. ಇನ್ನರೂ ಆತ್ಮೀಯರಾಗಿದ್ದರು ಎನ್ನಲಾಗಿದೆ.

ಚಂದ್ರಕಾಂತ್ 2015ರಲ್ಲಿ ಶಿಲ್ಪಾ ಎಂಬುವವರನ್ನು ವಿವಾಹವಾಗಿ ದಂಪತಿಗೆ ಇಬ್ಬರು ಮಕ್ಕಳು ಇದ್ದರು. ಆದರೆ ಪವಿತ್ರಾ ಜಯರಾಂ ಪರಿಚಯದ ಬಳಿಕ ಶಿಲ್ಪಾರಿಂದ ದೂರವಾಗಿದ್ದರು. ಪವಿತ್ರಾ ಜಯರಾಮ್ ಹಲವು ವರ್ಷಗಳಿಂದ ಪತಿಯಿಂದ ದೂರವಾಗಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಪವಿತ್ರಾ ಜಯರಾಂ ಹಾಗೂ ಆಕೆಯ ಇಬ್ಬರು ಮಕ್ಕಳು ಹಾಗೂ ಚಂದ್ರಕಾಂತ್ ಮಣಿಕೊಂಡಬಳಿ ಒಂದೇ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಪವಿತ್ರಾ ಜಯರಾಂ ಅಗಲಿಕೆಯಿಂದ ನೊಂದಿದ್ದ ಚಂದ್ರಕಾಂತ್ ಇದೀಗ ಫ್ಲಾಟ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.


Bottom Add3
Bottom Ad 2