ಮೂಲಸೌಕರ್ಯ ಅಭಿವೃದ್ಧಿಯಲ್ಲಿ ನಮ್ಮ ಕಾರ್ಯದ ಬಗ್ಗೆ ತೃಪ್ತಿಯಿದೆ : ಹಣಮಂತ ನಿರಾಣಿ

ಪ್ರಗತಿವಾಹಿನಿ ಸುದ್ದಿ, ಬೀಳಗಿ: ಬೀಳಗಿ ಮತಕ್ಷೇತ್ರಕ್ಕೆ ಕಳೆದ 5 ವರ್ಷಗಳಲ್ಲಿ ಮುರುಗೇಶ ನಿರಾಣಿಯವರುದಾಖಲೆಯ ಪ್ರಮಾಣದಲ್ಲಿ ಅನುದಾನ ತಂದು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಪ್ರತಿಗ್ರಾಮಕ್ಕೂ ನಿಶ್ಚಿತ ಮೂಲಭೂತ ಸೌಕರ್ಯ ನೀಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮಕಾರ್ಯವೈಖರಿ ಬಗ್ಗೆ ಜನತೆಗೆತೃಪ್ತಿ ಇದೆಎಂದು ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಹೇಳಿದರು.

ಬಿಸನಾಳ, ಗುಳಬಾಳ, ಸಿದ್ದಾಪುರ ಹಾಗೂ ಸೂಳಿಕೇರಿ ತಾಂಡಾಗಳಲ್ಲಿ ಸಹೋದರ ಹಾಗೂ ಬೀಳಗಿ ಬಿಜೆಪಿ ಅಭ್ಯರ್ಥಿ ಮುರುಗೇಶ ನಿರಾಣಿ ಪರವಾಗಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿ ನಂತರ ಸಾರ್ವಜನಿಕರನ್ನು ಉದ್ದೇಶಿಶಿಸಿ ಅವರು ಮಾತನಾಡಿದರು.

“ಪ್ರತಿ ಹಳ್ಳಿಯಲ್ಲೂ ಅಭಿವೃದ್ಧಿ ಕೆಲಸಗಳನ್ನು ಹುಡುಕಿ-ಹುಡುಕಿ ಮಾಡಿದ್ದೇವೆ. ಗ್ರಾಮದ ಪ್ರಮುಖರು ಅಭಿವೃದ್ದಿ ವಿಷಯದಲ್ಲಿ ಹೇಳಿದ ಎಲ್ಲ ಅಹವಾಲುಗಳನ್ನು ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸಿದ್ದೇವೆ. ಈ 5 ವರ್ಷಗಳಲ್ಲಿ ನಡೆದ ಕೆಲಸಗಳ ಬಗ್ಗೆ ಜನತೆ ಸಂತುಷ್ಠರಾಗಿದ್ದಾರೆ. ಸರ್ಕಾರದ ವೈಯಕ್ತಿಕ ಕಲ್ಯಾಣದ ಯೋಜನೆಗಳನ್ನು ಯೋಗ್ಯ ಫಲಾನುಭವಿಗಳನ್ನು ಹುಡುಕಿ ನೀಡಲಾಗಿದೆ. ಇದರಿಂದಾಗಿ ಅರ್ಹತೆಗೆ ಅನುಗುಣವಾಗಿ ಸರ್ಕಾರದ ಸೌಲಭ್ಯಗಳು ನೇರವಾಗಿ ಫಲಾನುಭವಿಗಳ ಮನೆ ಬಾಗಿಲಿಗೆ ದೊರಕಿವೆ. ನಿರಾಣಿ ಕುಟುಂಬ ಅಭಿವೃದ್ದಿ ವಿಷಯದಲ್ಲಿ ಎಂದಿಗೂ ರಾಜಕಾರಣ ಮಾಡಿಲ್ಲ” ಎಂದು ಅವರು ಹೇಳಿದರು.

“ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರವು ಮೀಸಲಾತಿ ವಿಷಯದಲ್ಲಿ ಯಾವುದೇ ಸಮಾಜಕ್ಕೆಅನ್ಯಾಯ ಮಾಡಿಲ್ಲ. ಕಾಂಗ್ರೆಸ್ ಪಕ್ಷವು ರಾಜಕೀಯ ದುರುದ್ದೇಶದಿಂದ ಅವೈಜ್ಞಾನಿಕ ಸಲಹೆಗಳನ್ನು ಜನರತಲೆಯಲ್ಲಿ ತುಂಬುತ್ತಿದೆ. ಇಷ್ಟು ವರ್ಷ ಮತಬ್ಯಾಂಕ ಆಗಿ ಬಳಸಿಕೊಂಡವರಿಂದ ಬಂಜಾರರು, ದಲಿತರು ಸೇರಿದಂತೆ ಯಾರಿಗೂ ಕಾಂಗ್ರೆಸ್‌ನಿಂದ ನಯಾಪೈಸೆ ಉಪಯೋಗವಾಗಿಲ್ಲ. ನಮ್ಮ ಪಕ್ಷವು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸವಲತ್ತುಗಳನ್ನು ನೀಡುವುದರ ಜೊತೆಗೆ ರಾಜಕೀಯವಾಗಿ ಹಿಂದುಳಿದವರು-ದಲಿತರಿಗೆ ಪ್ರಾತಿನಿಧ್ಯ ನೀಡುವಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ ಹೀಗಾಗಿ ಗಾಳಿಮಾತಿಗೆ ಕಿವಿಗೊಡದೇಎಲ್ಲರೂ ಬಿಜೆಪಿಯೊಂದಿಗೆ ಗಟ್ಟಿಯಾಗಿ ನಿಂತು ಆಶಿರ್ವದಿಸಿ” ಎಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಸಂಗಪ್ಪ ಉಳ್ಳಾಗಡ್ಡಿ, ವೆಂಕಣ್ಣ ಗಿಡ್ಡಪಗೋಳ ಸೇರಿ ಹಲವರು ಭಾಗಿಯಾಗಿದ್ದರು.

https://pragati.taskdun.com/recruitment-of-primary-school-teachers-department-notice-for-record-verification-preparation/
https://pragati.taskdun.com/vidhanasabha-electionsiddaramaiahv-somannavaruna/
https://pragati.taskdun.com/karnatakarain-alertimd/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button