*ಬೆಳಗಾವಿಯಲ್ಲಿ ಸೆ.28 , 29 ರಂದು ಸತೀಶ ಜಾರಕಿಹೊಳಿ ಚೆಸ್ ಟೋರ್ನಾಮೆಂಟ್: ಇಮ್ರಾನ್ ತಪ್ಪಕೀರ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಲ್ಲಿನ ಗೋವಾವೆಸ್ ಮಹಾವೀರ ಭವನದಲ್ಲಿ ಸೆ.28 ಮತ್ತು 29 ರಂದು ಸತೀಶ ಜಾರಕಿಹೊಳಿ ಓಪನ್ ಚೆಸ್ ಟೋರ್ನಾಮೆಂಟ್ ಆಯೋಜಿಸಲಾಗಿದೆ. ರಾಷ್ಟ್ರೀಯ ಚೆಸ್ ಟೋರ್ನಾಮೆಂಟ್ ಆದರಿಂದ ವಿವಿಧ ರಾಜ್ಯಗಳಿಂದ ಸ್ಪರ್ಧಿಗಳು ಆಗಮಿಸಲಿದ್ದಾರೆ ಎಂದು ಸತೀಶ ಪ್ಯಾನ್ಸ್ ಕ್ಲಬ್ ಅಧ್ಯಕ್ಷರಾದ ಇಮ್ರಾನ್ ತಪ್ಪಕೀರ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಿಂದ ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಓಪನ್ ಚೆಸ್ ಟೋರ್ನಾಮೆಂಟ್ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷದ ಸೆ. 28 ರಿಂದ ಎರಡು ದಿನಗಳ ವರೆಗೆ ಆಯೋಜಿಸಲಾಗಿದೆ. ಸ್ಪರ್ಧಾಳುಗಳಿಗೆ ಊಟ , ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಗುಜರಾತ್ , ರಾಜಸ್ಥಾನ, ಗೋವಾ ವಿವಿಧ ರಾಜ್ಯಗಳಿಂದ ಚಾಂಪಿಯನ್ ಸ್ಪರ್ಧಾಳುಗಳು ಆಗಮಿಸಲಿದ್ದಾರೆ. ಓಪನ್ ಚೆಸ್ ಟೋರ್ನಾಮೆಂಟ್ ಆದರಿಂದ ಸ್ಪರ್ಧಿಸುವವರಿಗೆ ಒಂದು ಸಾವಿರ (1000) ರೂ. ಪ್ರವೇಶ ಪೀ ನಿಗದಿ ಪಡಿಸಲಾಗಿದೆ. ಅಂಡರ್ 16 ಸ್ಪರ್ಧಾಳುಗಳಿಗೆ 800 ರೂ. ಪ್ರವೇಶ ಫೀ ನಿಗದಿ ಪಡಿಸಲಾಗಿದೆ ಎಂದು ಹೇಳಿದರು.
ಸಚಿವ ಸತೀಶ ಜಾರಕಿಹೊಳಿ ಅವರು ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ವಿವಿಧ ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಸಹಾಯ-ಸಹಕಾರ ನೀಡುತ್ತಾ ಬಂದಿದ್ದಾರೆ. ಸಚಿವ ಸತೀಶ ಜಾರಕಿಹೊಳಿ ಅವರ ಆಶೀರ್ವಾದಿಂದ ಕಳೆದ ಎರಡು ವರ್ಷಗಳಿಂದ ಸತೀಶ ಜಾರಕಿಹೊಳಿ ಓಪನ್ ಚೆಸ್ ಟೋರ್ನಾಮೆಂಟ್ ನಡೆಸಲಾಗುತ್ತಿದೆ. ಸಹಸ್ರಾರು ಸ್ಪರ್ಧಾಳುಗಳು ಭಾಗವಹಿಸಿ ವಿಜೇತರಾಗಬೇಕು. ಒಟ್ಟು 3.5 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು. ಮೊದಲ ಬಹುಮಾನ 1 ಲಕ್ಷ ರೂ. ಮತ್ತು ಟ್ರೋಫಿ, ಎರಡನೇಯ ಬಹುಮಾನ 50 ಸಾವಿರ ರೂ. ಟ್ರೋಫಿ, ಹಾಗೂ ಮೂರನೇಯ ಬಹುಮಾನ 25 ಸಾವಿರ ರೂ. ಮತ್ತು ಟ್ರೋಫಿ ನೀಡಿ ಗೌರವಿಸಲಾಗುವುದು. ಉಳಿದ ಸ್ಪರ್ಧಾಳುಗಳಿಗೆ ಸಮಾನಾಧಕರ ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಬೆಳಗಾವಿ ಚೆಸ್ ಅಸೋಸಿಯೇಷನ್ ಅದ್ಯಕ್ಷ ಬಸವರಾಜ ಬಾಗೇವಾಡಿ ಮಾತನಾಡಿ, ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಸುವ ಮಹತ್ವದ ಕಾರ್ಯವನ್ನು ಸತೀಶ ಜಾರಕಿಹೊಳಿ ಫೌಂಡೇಶನ್ ದಿಂದ ನಿರಂತರ ಮಾಡಲಾಗುತ್ತಿದೆ. ಎಲ್ಲಾ ಸ್ಪರ್ಧಾಳುಗಳು ಓಪನ್ ಚೆಸ್ ಟೋರ್ನಾಮೆಂಟ್ ಸ್ಪರ್ಧಿಸಿ ಟ್ರೋಫಿಯನ್ನು ಮುಡಿಗೇರಿಸಿಕೊಳ್ಳಬೇಕು. ಚೆಸ್‌ನಲ್ಲಿ ಸ್ಪರ್ಧಿಸುವ ಮಕ್ಕಳಿಗೆ ಬಹಳಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ಅದಕ್ಕಾಗಿ ಬೆಳಗಾವಿಯಲ್ಲಿ ಚೆಸ್ ಭವನ ನಿರ್ಮಾಣಕ್ಕೆ ಮನವಿ ಜಿಲ್ಲಾಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ದೀಕ್ಷಾ ಪೂಜಾರಿ ಮಾತನಾಡಿ, ಯುವಕ, ಯುವತಿಯರನ್ನು ಪ್ರತಿರಂಗದಲ್ಲಿ ಬೆಳೆಸುವ ಉದ್ದೇಶದಿಂದ ಸತೀಶ ಜಾರಕಿಹೊಳಿ ಫೌಂಡೇಶನ್ ದಿಂದ ಅನೇಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ತಿಂಗಳಿನಲ್ಲಿ ಸತೀಶ ಜಾರಕಿಹೊಳಿ ಓಪನ್ ಚೆಸ್ ಟೋರ್ನಾಮೆಂಟ್ ನಡೆಯಲಿದೆ. ಇದರಿಂದ ಮಕ್ಕಳ ಜ್ಞಾನ ವೃದ್ದಿಯಾಗಲಿದೆ. ಎಲ್ಲರೂ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ನಿಕಿತಾ ತಾರಡೆ, ಪ್ರಶಾಂತ ಅನ್ವೇಕರ್, ಆಕಾಶ ಮಡಿವಾಳ, ಅಜೇಯ ದಾಮಣೆಕರ್, ಅಕ್ಬರ್ ಸರ್ಡೆಕರ್, ಶಾನವಾಜ್ ಕೀಲ್ಲೇದಾರ್ ಹಾಗೂ ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ