ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಿಂದೂ ಪದಕ್ಕೆ ಅಸಭ್ಯ ಅರ್ಥವಿದ್ದು ಅದರ ಮೂಲ ಭಾರತವಲ್ಲ ಎಂಬ ಹೇಳಿಕೆ ನೀಡಿ ವಿವಾದಕ್ಕೆ ಕಾರಣರಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ನಾನು ಯಾವುದೇ ಧರ್ಮ, ಭಾಷೆ ಬಗ್ಗೆ ಅವಮಾನಿಸುವ ಉದ್ದೇಶದಿಂದ ಹೇಳಿಲ್ಲ. ನಾನು ಯಾವುದೇ ಒಂದು ಧರ್ಮ, ಜಾತಿಗೂ ಸೀಮಿತವಾಗಿಲ್ಲ, ಯಾವುದೇ ಧರ್ಮ, ಭಾಷೆ ಬಗ್ಗೆ ನಾನು ಅವಮಾನಿಸುವ ಪ್ರಶೆಯೇ ಇಲ್ಲ ಎಂದು ಹೇಳಿದ್ದಾರೆ.
ಹಿಂದೂ ಧರ್ಮದ ಬಗ್ಗೆ ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣವನ್ನು ಒಮ್ಮೆ ಕೇಳಬೇಕು. ಹಿಂದೂ ಧರ್ಮ ಅಂದರೆ ಅದು ವೇ ಆಫ್ ಲೈಫ್. ಇದನ್ನೇ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಯಾವುದೇ ಜಾತಿ, ಧರ್ಮವನ್ನು ನಂಬದೇ ಇರುವ ವ್ಯಕ್ತಿ ನಾನು. ಯಾವ ಧರ್ಮವನ್ನೂ ಅಪಮಾನ ಮಾಡುವ ಉದ್ದೇಶ ನನಗಿಲ್ಲ. ನಾನು ಮಾಡಿದ ಭಾಷಣವನ್ನು ಹತ್ತು ಬಾರಿ ಕೇಳಿ. ತಪ್ಪಿದ್ರೆ ಇದೇ ರೀತಿ ಚರ್ಚೆ ಮುಂದುವರೆಸಿ. ಹೀಗೆ ಮುಂದುವರೆದರೆ ಮಾನಹಾನಿ ಮೊಕದ್ದಮೆ, ಕಾನೂನು ಕ್ರಮಕೈಗೊಳ್ಳಬೇಕಾಗುತ್ತೆ. ವಿಕಿಪೀಡಿಯಾದಲ್ಲಿ ಇರುವುದನ್ನು ಹೇಳಿದ್ದೇನೆ.
ದಯವಿಟ್ಟು ಈ ವಿಚಾರ ಇಲ್ಲಿಗೆ ನಿಲ್ಲಿಸಿ. ಯಾವ ರೀತಿಯಾಗಿ ಪಿತೂರಿಗಳು ನಡೆಯುತ್ತಿವೆ ಎಂಬುದನ್ನು ಸಾರ್ವಜನಿಕರು ತಿಳಿದುಕೊಳ್ಳಬೇಕು. ನಾನು ಯಾವುದೇ ಜಾತಿ, ಧರ್ಮ ಅವಮಾನ ಮಾಡುವವನಲ್ಲ ಎಂದು ಹೇಳಿದ್ದಾರೆ.
ಭೀಕರ ಅಪಘಾತ; 3 ವಿದ್ಯಾರ್ಥಿಗಳು ಸೇರಿ ನಾಲ್ವರ ದುರ್ಮರಣ
https://pragati.taskdun.com/latest/maharastraaccident4-death/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ