Kannada NewsLatest

ಅವಮಾನ ಮಾಡಿ ಒತ್ತಡ ತಂತ್ರದಿಂದ ಬಿಎಸ್ ವೈ ರಾಜೀನಾಮೆ ಪಡೆಯಲಾಗಿದೆ; ಸತೀಶ್ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬಿಜೆಪಿ ನಾಯಕರು ಬಿ.ಎಸ್.ಯಡಿಯೂರಪ್ಪ ಮೇಲೆ ಒತ್ತಡ ತಂತ್ರದಿಂದ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಸವಣ್ಣನವರ ರೀತಿ ಬಿಎಸ್ ವೈ ಅವರನ್ನು ಕೆಳಗಿಳಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಯಡಿಯೂರಪ್ಪನವರನ್ನು ಇಷ್ಟೊಂದು ಅವಮಾನಗೊಳಿಸಬಾರದಿತ್ತು. ಹಿರಿಯ ನಾಯಕನಿಗೆ ಗೌರವಯುತವಗೈ ಹೋಗಲು ಅವಕಾಶ ನೀಡಬೇಕಿತ್ತು. ಒತ್ತಡ ಹೇರಿ ಹಿರಿಯ ನಾಯಕನನ್ನು ಅಗೌರವದಿಂದ ಕೆಳಗಿಳಿಸಿದ್ದಾರೆ. ಇದನ್ನು ಯಾರೂ ಸಹಿಸಲು ಆಗಲ್ಲ ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರ ವಿರುದ್ಧ ನಡೆದ ಪಿತೂರಿ ಇಂದು ಬಿಎಸ್ ವೈ ವಿರುದ್ಧವೂ ನಡೆದಿದೆ. ಅಂದು ಬಸವಣ್ನನವರನ್ನು ಮನುವಾದಿಗಳು ಕೆಳಗಿಳಿಸಿದ್ದರು. ಇಂದು ಓರ್ವ ಜನ ನಾಯಕನನ್ನು ಅದೇ ರೀತಿ ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಅಂದು ಮನುವಾದಿಗಳು ಯಶ್ವಿಯಾದರು ಇಂದೂ ಕೂಡ ಮನುವಾದಿಗಳು ಯಶ್ವಿಯಾದಂತಿದೆ. ಯಡಿಯೂರಪ್ಪ ಮನುವಾದಿಗಳ ವಿರುದ್ಧ ಹೋರಾಡಬೇಕು ಎಂದು ಹೇಳಿದ್ದಾರೆ

ಓರ್ವ ಭ್ರಷ್ಟ ಸಿಎಂ ತೆಗೆದು ಇನ್ನೋರ್ವ ಭ್ರಷ್ಟನನ್ನು ಸಿಎಂ ಮಾಡ್ತಾರೆ; ಸಿದ್ದರಾಮಯ್ಯ ಕಿಡಿ

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button