ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಬೆಳಗಾವಿ ಉತ್ತರ ಮತಕ್ಷೇತ್ರದ ಸಮಗ್ರ ಅಭಿವೃದ್ದಿಯ ಹಿತದೃಷ್ಟಿಯಿಂದ ಶಾಸಕ ಅನಿಲ ಬೆನಕೆ ಸೋಮವಾರದಿಂದ ವಾರ್ಡ್ ವಾಚ್ ಕಾರ್ಯಕ್ರಮ ನಡೆಸಲಿದ್ದಾರೆ.
ಪ್ರತಿ ದಿನ ಬೆಳಿಗ್ಗೆ 8.30 ರಿಂದ 10.30ರವರೆಗೆ ಪ್ರತಿದಿನ ಒಂದು ವಾರ್ಡನಂತೆ ಸ್ಥಳ ಪರಿಶಿಲನೆ ಮಾಡಿ ಅಲ್ಲಿನ ಮೂಲಭೂತ ಸೌಕರ್ಯಗಳಾದ ನೀರು, ರಸ್ತೆ, ಗಟಾರ ಹಾಗೂ ಇತರ ಕುಂದು ಕೊರತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಸ್ಥಳೀಯರ ಜೊತೆಗೆ ಚರ್ಚಿಸಿ ಸಮಸ್ಯೆಗಳನ್ನು ನಿವಾರಿಸಲು ನಿರ್ಧರಿಸಿದ್ದಾರೆ.
ಅದೇ ರೀತಿ ಬೆಳಗಾವಿ ಉತ್ತರ ಮತಕ್ಷೇತ್ರದ ಎಲ್ಲ ಅಭಿವೃಧ್ದಿ ಕಾಮಗಾರಿಗಳನ್ನು ಪರಿಶೀಲಿಸಿ ಅಧಿಕಾರಿಗಳ, ಸ್ಥಳೀಯರ ಸಹಕಾರದೊಂದಿಗೆ ಕಾಮಗಾರಿಗಳಿಗೆ ಬರುವ ಅನುದಾನ ಹಾಗೂ ಅದರ ವಿವರಗಳನ್ನು ಪಡೆದು ಅಪೂರ್ಣವಾಗಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಭಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಸ್ಥಳದಲ್ಲಿಯೆ ಪರಿಹಾರ ಒದಗಿಸಲಾಗುವುದು ಎಂದು ಬೆನಕೆ ತಿಳಿಸಿದ್ದಾರೆ.
ಬೆಳಗಾವಿ ಉತ್ತರ ಮತಕ್ಷೇತ್ರದ ಯಾವುದೇ ಸಮಸ್ಯೆ ಇದ್ದರು ನಾಗರಿಕರು ನೇರವಾಗಿ ಶಾಸಕರ ಕಚೇರಿ ಹಾಗೂ ಶಾಸಕರನ್ನು ಸಂಪರ್ಕಿಸಬೇಕು ಮತ್ತು ಬೆಳಗಾವಿ ನಗರವನ್ನು ಸ್ಮಾರ್ಟ್ ಸಿಟಿ ಅಡಿಯಲ್ಲಿ ಒಂದು ಸುಂದರ ನಗರವನ್ನಾಗಿ ಮಾಡಲು ಸಹಕಾರವನ್ನು ನೀಡಬೇಕು ಎಂದು ವಿನಂತಿಸಿದ್ದಾರೆ.
ಸೋಮವಾರ (ಮೇ 27ರಂದು) ವಾರ್ಡ ನಂ.೨೭ ಮಹಾದ್ವಾರ ರೋಡ್.