*ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಬಂದಿಲ್ಲ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಮಾಜಿ ಸಿಎಂ, ದಿ. ದೇವರಾಜ್ ಅರಸು ದಾಖಲೆ ಸಿಎಂ ಸಿದ್ಧರಾಮಯ್ಯ ಅವರು ಮುರಿದಿದ್ದಾರೆ. ಅವರು ಅತ್ಯಂತ ಶ್ರಮಪಟ್ಟು ಈ ಸ್ಥಾನಕ್ಕೆ ತಲುಪಿದ್ದು ಹೆಮ್ಮೆಯ ವಿಷಯ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಹುಕ್ಕೇರಿಯಲ್ಲಿ ಮಾಧ್ಯಮಗಾರರೊಂದಿಗೆ ಮಾತನಾಡಿದ ಅವರು, 5 ವರ್ಷ ಸಿಎಂ ಅವಧಿಯಲ್ಲಿ ಅವರು ಮುಂದುವರೆಯುತ್ತಾರೆಂದು ಸ್ವತಃ ಅವರೇ ಹೇಳಿದ್ದಾರೆ. ಮುಂದಿನ ಬಜೆಟ್ ಕೂಡ ಅವರೇ ಮಂಡಿಸುತ್ತಾರೆ. ಇನ್ನು ಎಲ್ಲ ರಾಜಕೀಯ ಪಕ್ಷಗಳಲ್ಲಿ ಗೊಂದಲಗಳು ಇದ್ದೇ ಇರುತ್ತವೆ. ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಬಂದಿಲ್ಲಎಂದರು.
ಮೊದಲ ಮಹಾಯುದ್ಧ ವಿದ್ಯುತ್ ಸಂಘದ ಚುನಾವಣೆ ಗೆದ್ದಿದ್ದು, ಎರಡನೇ ಮಹಾಯುದ್ಧ ಗ್ರಾಮ ಪಂಚಾಯಿತಿ ಚುನಾವಣೆ. ಇದರಲ್ಲಿ ಜಾರಕಿಹೊಳಿ ಅವರನ್ನು ಸೋಲಿಸುವುದೇ ಎಂಬ ಮಾಜಿ ಸಂಸದ ರಮೇಶ್ ಕತ್ತಿ ಅವರ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ತಿರುಗೇಟು ನೀಡಿದ್ದಾರೆ. ಎಲ್ಲರೂ ಗೆಲ್ಲೋಕೆ ಅಂತಾನೆ ಚುನಾವಣೆಯಲ್ಲಿ ಸ್ಪರ್ಧಿಸ್ತಾರೆ. 2028 ಬಂದಾಗ ನೋಡೋಣ. ನಮ್ಮ ಹೋರಾಟವನ್ನು ಬಹಿರಂಗವಾಗಿ ಹೇಳೊಕಾಗಲ್ಲ ಎಂದಿದ್ದಾರೆ.
ಬಳ್ಳಾರಿ ಬ್ಯಾನರ್ ಗಲಾಟೆಗೆ ಸಂಬಂಧಿಸಿದಂತೆ ಈ ಕುರಿತು ತನಿಖೆ ನಡೆದಿದೆ. ಹಲವರನ್ನು ವಶಕ್ಕೆ ಪಡೆದಿದ್ದಾರೆ ಎಂದರು. ಅದೇ ರೀತಿ ಡಿಸಿಸಿ ಬ್ಯಾಂಕ್ ಯುನಿಯಲ್ ಲೀಡರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಬಳಿಕ ಯಾರೂ ತಪ್ಪಿತಸ್ಥರು ಎಂಬುದು ಗೊತ್ತಾಗಲಿದೆ ಎಂದರು.
ಇನ್ನು ಮೊದಲ ಮಹಾಯುದ್ಧ ವಿದ್ಯುತ್ ಸಂಘದ ಚುನಾವಣೆ ಗೆದ್ದಿದ್ದು, ಎರಡನೇ ಮಹಾಯುದ್ಧ ಗ್ರಾಮ ಪಂಚಾಯಿತಿ ಚುನಾವಣೆ. ಇದರಲ್ಲಿ ಜಾರಕಿಹೊಳಿ ಅವರನ್ನು ಸೋಲಿಸುವುದೇ ಎಂಬ ಮಾಜಿ ಸಂಸದ ರಮೇಶ್ ಕತ್ತಿ ಅವರ ಹೇಳಿಕೆಗೆ ಎಲ್ಲರೂ ಗೆಲ್ಲೋಕೆ ಬರುತ್ತಾರೆ. ಸೋಲೋಕೆ ಯಾರು ಬರಲ್ಲ. ನಮ್ಮ ಹೋರಾಟವನ್ನು ಬಹಿರಂಗವಾಗಿ ಹೇಳೋಕಾಗಲ್ಲ. 2028 ರಲ್ಲಿ ನೋಡೋಣ ಎಂದರು.




