*ವೈರಲ್ ಆಯ್ತು ಸತೀಶ್ ಜಾರಕಿಹೊಳಿ ಪತ್ರ* *ಅವರಿಗೂ ಇದಕ್ಕೂ ಸಂಬಂಧವಿಲ್ಲ ಎಂದ ಸಂತ್ರಸ್ತ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : *ಉದ್ಯಮಿಯೊಬ್ಬರ ಅಪಹರಣದಲ್ಲಿ ಬಂಧಿಸಲ್ಪಟ್ಟಿರುವ ಮಂಜುಳಾ ರಾಮನಗಟ್ಟಿ ನೇಮಕ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ ಕಳೆದ ವರ್ಷ ಕೊಟ್ಟಿದ್ದ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟಪ್ರಭಾದ ಬಸವರಾಜ ಎನ್ನುವವರ ಅಪಹರಣದಲ್ಲಿ ಮಂಜುಳಾ ರಾಮಗಾನಟ್ಟಿ ಪಾತ್ರ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಆಕೆ ಆಪ್ತೆ ಇರಬಹುದು, ಆದರೆ ಕಿಡ್ನ್ಯಾಪ್ ಮಾಡು ಎಂದು ನಾವು ಹೇಳುತ್ತೇವಾ ಎಂದು ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದರು.
ಇದೀಗ ಈ ಹಿಂದೆ ಸತೀಶ್ ಆಕೆಯ ಪರವಾಗಿ ಬರೆದ ಪತ್ರ ವೈರಲ್ ಆಗುತ್ತಿದೆ. ಆರೋಗ್ಯ ರಕ್ಷಾ ಸಮಿತಿಗೆ ಮಂಜುಳಾ ಅವರನ್ನು ನೇಮಕ ಮಾಡುವಂತೆ ಸತೀಶ್ 2024ರ ಮಾರ್ಚ್ 15ರಂದು ಸರಕಾರಕ್ಕೆ ಶಿಫಾರಸ್ಸು ಮಾಡಿದ್ದರು. ಗೋಕಾಕ ತಾಲೂಕು ಆರೋಗ್ಯ ರಕ್ಷಾ ಸಮಿತಿಗೆ ಮಂಜುಳಾ ಸೇರಿ 8 ಜನರ ನಾಮನಿರ್ದೇಶನಕ್ಕೆ ಅವರು ಶಿಫಾರಸ್ಸು ಮಾಡಿದ್ದರು.
ಮಂಜುಳಾ, ಸತೀಶ್ ಮತ್ತು ಪ್ರಿಯಾಂಕಾ ಜಾರಕಿಹೊಳಿ ಜೊತೆ ಇರುವ ಫೋಟಗಳು ನಿನ್ನೆ ವೈರಲ್ ಆಗಿದ್ದವು. ಇಂದು ಸತೀಶ್ ಕೊಟ್ಟಿದ್ದ ಶಿಫಾರಸ್ಸು ಪತ್ರ ವೈರಲ್ ಆಗಿದೆ.
ಆದರೆ ತಮ್ಮ ಅಪಹರಣ ಪ್ರಕರಣಕ್ಕೂ ಸತೀಶ್ ಜಾರಕಿಹೊಳಿಗೂ ಯಾವುದೇ ಸಂಬಂಧವಿಲ್ಲ ಎಂದು ಉದ್ಯಮಿ ಬಸವರಾಜ ಹೊಳಿಕೆ ನೀಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ