ಬೆಳಗಾವಿ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ
ಪ್ರಗತಿವಾಹಿನಿ ಸುದ್ದಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಸರ್ಕಾರಿ ಕ್ರೀಡಾ ಶಾಲೆ ಮತ್ತು ಮಹಿಳಾ ಕ್ರೀಡಾಪಟುಗಳ ವಸತಿ ನಿಲಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ನಗರದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸರ್ಕಾರಿ ಕ್ರೀಡಾ ಶಾಲೆ ಮತ್ತು ಮಹಿಳೆ ಕ್ರೀಡಾಪಟುಗಳ ವಸತಿ ನಿಲಯಕ್ಕೆ ಸಚಿವರು ದಿಢೀರ್ ಭೇಟಿ ನೀಡಿ, ವಸತಿ ನಿಲಯಗಳ ಸುತ್ತಲಿನ ಪರಿಸರ, ಅಡುಗೆ ಕೋಣೆ, ಡೈನಿಂಗ್‌ಹಾಲ್, ವಿಶ್ರಾಂತಿ ಕೋಣೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು.
ಈ ವೇಳೆ ಸಚಿವ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಆಹಾರ, ಶುದ್ಧ ಕುಡಿ ಯುವ ನೀರು ವಿದ್ಯಾರ್ಥಿಗಳ ಕೊಠಡಿ ಮತ್ತು ಮೇಲ್ವಿಚಾರಣೆಯನ್ನು ಪರೀಶೀಲಿಸಿದ ಸಚಿವರು, ಗುಣಮಟ್ಟದ ಹಾಸಿಗೆ, ಸ್ಟಡಿ ಟೇಬಲ್‍ಗಳನ್ನು ವಿದ್ಯಾರ್ಥಿಗಳ ಅನುಕೂಲಕ್ಕೆ ಅನುಗುಣವಾಗಿ ನಿರ್ಮಿಸುವಂತೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ಯಾವ.. ಯಾವ… ಸ್ಪೋರ್ಟ್‌ಗಳಲ್ಲಿ ಸ್ಪರ್ಧಿಸಿರುವ ಬಗ್ಗೆ ಕ್ರೀಡಾಪಟುಗಳ ಹತ್ತಿರ ಸಚಿವರು ಮಾಹಿತಿ ಪಡೆದು. ಸುರ್ದೀಘವಾಗಿ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದ ಬಳಿಕ, ಈ ಕ್ರೀಡಾ ಶಾಲೆಗಳಿಗೆ ಹೆಚ್ಚುವರಿ ಕೊಠಡಿ ಇನ್ನೂಳಿದ ಸೌಲಭ್ಯಗಳನ್ನು ತ್ವರಿತವಾಗಿ ಈಡೇರಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ವಿದ್ಯಾರ್ಥಿಗಳಿಗೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.
ಇತ್ತೀಚೆಗೆ ರಾಷ್ಟ್ರಮಟ್ಟದ ಸೈಕ್ಲಿಂಗ್ ನಲ್ಲಿ ಬೆಳಗಾವಿ ಕ್ರೀಡಾ ಪಟುಗಳು ಸ್ಪರ್ಧಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದಕ್ಕೆ ಸಚಿವ ಸತೀಶ ಜಾರಕಿಹೊಳಿ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.
ಕಳೆದ 30 ವರ್ಷಗಳಿಂದ ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಾ ಬಂದಿದ್ದೆವೆ. ಬೆಳಗಾವಿ ಕ್ರೀಡಾ ಪಟುಗಳು ಕ್ರೀಡಾಪಟುಗಳು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಗುರುಸಿಕೊಳ್ಳಬೇಕು. ಈ ನಾಡಿನ ಕೀರ್ತಿಗೆ ಪಾತ್ರರಾಗಬೇಕು ಎಂದು ಹೇಳಿದರು.
ಶಾಸಕ ರಾಜು (ಆಪೀಸ್) ಸೇಠ , ಜಿಲ್ಲಾಧಿಕಾರಿ ಮೊಮ್ಮಹದ್ ರೋಷನ್, ಜಿಪಂ ಇಸಿಓ ರಾಹುಲ್ ಶಿಂಧೆ, ಎಸ್ಪಿ ಭೀಮಾಶಂಕರ ಗುಳೇದ, ಬೂಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕೆಪಿಸಿಸಿ ಸದಸ್ಯ ಮಲ್ಲಗೌಡ ಪಾಟೀಲ, ಮಹಾವೀರ ಮೊಹಿತೆ, ಮಲ್ಲೇಶ ಚೌಗಲೆ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು, ವಿದ್ಯಾರ್ಥಿಗಳು ಇತರರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ