Belagavi NewsBelgaum NewsKarnataka NewsLatestPolitics

*ಸಚಿವ ಸತೀಶ್ ಜಾರಕಿಹೊಳಿ ನಿವಾಸಕ್ಕೆ ಎರಡು ಪೆಟ್ಟಿಗೆಯೊಂದಿಗೆ ಎಂಟ್ರಿಕೊಟ್ಟ ಬ್ಯಾಂಕ್ ಸಿಬ್ಬಂದಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಇಡಿ ಪರಿಶೀಲನೆ ಮುಂದುವರೆದಿದ್ದು, ಇಂಡಿಯನ್ ಬ್ಯಾಂಕ್ ಸಿಬ್ಬಂದಿ ಎರಡು ದೊಡ್ಡ ಪೆಟ್ಟಿಗೆಯೊಂದಿಗೆ ನಿವಾಸಕ್ಕೆ ಆಗಮಿಸಿದೆ.

ನಿನ್ನೆ ಬೆಳಿಗ್ಗೆಯಿಂದ ಸಚಿವ ಸತೀಶ್ ಜಾರಕಿಹೊಳಿ ನಿವಾಸಗಳು ಹಾಗೂ ಆಪ್ತರ ಮೇಲೆ ದಾಳಿ ನಡೆದಿದ್ದು, ಗೋಕಾಕ್ ನ ಹಿಲ್ಸ್ ಗಾರ್ಡನಗೆ ಇಂಡಿಯನ್ ಬ್ಯಾಂಕ್ ಸಿಬ್ಬಂದಿ ಎರಡು ದೊಡ್ಡ ಪೆಟ್ಟಿಗೆಯೊಂದಿಗೆ ನಿವಾಸಕ್ಕೆ ಆಗಮಿಸಿದ್ದಾರೆ.‌ ಬ್ಯಾಂಕ್ ಸಿಬ್ಬಂದಿ ಆಗಮಿಸಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಇ.ಡಿ. ತನಿಖೆಯಲ್ಲಿ ಬ್ಯಾಂಕ್ ದಾಖಲೆಗಳ ಪರಿಶೀಲನೆ ನಡೆಯುತ್ತಿರುವ ಸಾಧ್ಯತೆ ಇದೆ. ಈ ಪ್ರಕರಣಕ್ಕೆ ಸಂಭಂಧಿಸಿ ಹಲವು ಆಯಾಮಗಳಲ್ಲಿ ಇ.ಡಿ ಅಧಿಕಾರಿಗಳ ತನಿಖೆ ಮುಂದುವರೆಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button