Kannada NewsLatest

ಸವದತ್ತಿ ಪೊಲೀಸರಿಂದ ಮನೆಗಳ್ಳರ ಬಂಧನ

ಪ್ರಗತಿವಾಹಿನಿ ಸುದ್ದಿ, ಸವದತ್ತಿ: ಹಗಲಲ್ಲಿ ಚಿಂದಿ ಆಯುವವರು, ಭಿಕ್ಷುಕರಾಗಿ ಬಂದು ರಾತ್ರಿ ಮನೆಗಳಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು  ಯಲ್ಲಮ್ಮನ ಗುಡ್ಡದಲ್ಲಿ ಬಂಧಿಸಿದ್ದಾರೆ.

ಪೊಲೀಸರು ಆರೋಪಿಗಳ ಹೆಸರು ಬಹಿರಂಗಪಡಿಸಿಲ್ಲ. ಆರೋಪಿತರಿಂದ ಚುಳುಕಿ, ಬೆಟಸೂರ, ಚಿಕ್ಕ ಉಳ್ಳಿಗೇರಿಯಲ್ಲಿ ಕಳುವು ಮಾಡಿದ 60 ಗ್ರಾಂ ಚಿನ್ನಾಭರಣಗಳು, 100 ಗ್ರಾಂ ಬೆಳ್ಳಿ ಮೂರ್ತಿಗಳು, 50 ಸಾವಿರ ರೂ. ನಗದು ಸೇರಿದಂತೆ 3.60 ಲಕ್ಷ ಮೌಲ್ಯದ ನಗದು ಹಾಗೂ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೆಟಸೂರ ಗ್ರಾಮದ ಹೊರವಲಯದ ಗುರಪ್ಪ ಬಸಪ್ಪ ಅಳಗೋಡಿ ಎಂಬುವವರ ಮನೆಯಲ್ಲಿ ಜ.6ರಂದು ಕಳುವು ಪ್ರಕರಣ ನಡೆದಿತ್ತು. ಅವರು ಈ ಸಂಬಂಧ ಸವದತ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ರಾಮದುರ್ಗ ಡಿಎಸ್ ಪಿ ರಾಮನಗೌಡ ಹಟ್ಟಿ ಅವರ ಮಾರ್ಗದರ್ಶನದಲ್ಲಿ ಪಿಐ ಕರುಣೇಗೌಡ ಜೆ., ಪಿಎಸ್ ಐಗಳಾದ ಪ್ರವೀಣ ಗಂಗೋಳ, ಕೆ.ಎಂ.ಕಲ್ಲೂರ, ಎಎಸ್ ಐ ರಮೇಶ ಗೆಜ್ಜೇರಿ, ಸಿಬ್ಬಂದಿಗಳಾದ ಉಮೇಶ ಗಾಣಗಿ, ಮಲ್ಲಿಕಾರ್ಜುನ ತೇರದಾಳ ಹನುಮಂತ ವಾಸನ, ಆನಂದ ಕಪ್ಪತ್ರಿ, ಶ್ರೀಕಾಂತ ಜಾಧವ, ಸರಸ್ವತಿ ಹಂಪಣ್ಣವರ, ಸವಿತಾ ಹೊಸೂರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆರೋಪಿತರು ಹಗಲಿನಲ್ಲಿ ಭಿಕ್ಷುಕರು ಹಾಗೂ ಚಿಂದಿ ಆಯುವವರ ಸೋಗಿನಲ್ಲಿ ಬಂದು ಮನೆಗಳ ಕಳುವಿಗೆ ಸ್ಕೆಚ್ ಹಾಕುತ್ತಿದ್ದರು. ನಂತರ ರಾತ್ರಿ ಯಾರೂ ಇಲ್ಲದ ಮನೆಗಳಿಗೆ ನುಗ್ಗಿ ಕಳುವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

*ಕುಮಾರಣ್ಣ ಪಕ್ಷ ವಿಸರ್ಜನೆ ಮಾಡುತ್ತಿದ್ದಾರೆ; ಎಲ್ಲರೂ ಬಂದು ಕಾಂಗ್ರೆಸ್ ಸೇರಿಕೊಳ್ಳಿ ಎಂದು ಕರೆ ಕೊಟ್ಟ ಡಿ.ಕೆ.ಶಿವಕುಮಾರ್*

https://pragati.taskdun.com/d-k-shivakumarjdsbjp-govt/

*ಅಮಿತ್ ಶಾ ಆಗಮನ; ಕಿತ್ತೂರು ಕರ್ನಾಟಕದಲ್ಲಿ ಮಿಂಚಿನ ಸಂಚಲನ ಎಂದ ಸಿಎಂ*

https://pragati.taskdun.com/amith-shahbelagavikitturu-karnatakacm-basavaraj-bommai/

ಮನ ಸೆಳೆಯುವ ‘ಎಂಟೆಲೆಕಿ’ ಪ್ರದರ್ಶನ

https://pragati.taskdun.com/enthralling-enteleki-performance/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button