*ಸವದತ್ತಿ ರೇಣುಕಾಯಲ್ಲಮ್ಮ ಭಕ್ತರಿಗೆ ಗುಡ್ ನ್ಯೂಸ್: ವಿಶೇಷ ಬಸ್ ಸೇವೆ ಆರಂಭ*
ಪ್ರಗತಿವಾಹಿನಿ ಸುದ್ದಿ: ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಸವದತ್ತಿ ರೇಣುಕಾ ಯಲ್ಲಮ್ಮ ಭಕ್ತರಿಗೆ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಿದೆ. ಹುಬ್ಬಳ್ಳಿಯಿಂದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ರೇಣುಕಾ ಯಲ್ಲಮ್ಮ ಗುಡ್ಡಕ್ಕೆ ವಿಸೇಷ ಬಸ್ ಸೇವೆ ಕಲ್ಪಿಸಿದೆ.
ಈ ಬಸ್ ಗಳು ನಾಳೆ ಭಾನುವಾರ ಹುಣ್ಣಿಮೆಯಂದು ಹಾಗೂ ಅಮವಾಸ್ಯೆಯವರೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರದಂದು ಹುಬ್ಬಳ್ಳಿಯಿಂದ ಯಲ್ಲಮ್ಮನ ಗುಡ್ಡಕ್ಕೆ ತೆರಳಿದ್ದು, ಸಾರ್ವಜನಿಕರು ಇದರ ಅನುಕೂಲ ಪಡೆಯುವಂತೆ ಕೋರಲಾಗಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ಈ ಕುರಿತು ಮಾಹಿತಿ ನೀಡಿದ್ದು, ಪ್ರಯಾಣಿಕರ ಕೋರಿಕೆ ಹಿನ್ನೆಲೆಯಲ್ಲಿ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಶೀಗೆ ಹುಣ್ಣಿಮೆ, ದೀಪಾವಳಿ ಅಮವಾಸ್ಯೆ ಹಾಗೂ ನಂತರದ ಹುಣ್ಣಿಮೆಗಳ ಸಮಯದಲ್ಲಿ ಸವದತ್ತಿಗೆ ಹುಬ್ಬಳ್ಳಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ನಿರೀಕ್ಷೆಗೂ ಮೀರಿದ ಸ್ಪಂದನೆ ಸಿಕ್ಕಿತ್ತು. ಹಾಗಾಗಿ ಈ ಬಾರಿಯೂ ಅಮವಾಸ್ಯೆವರೆಗೆ ಬಸ್ ವ್ಯವಸ್ಥೆ ಮುಂದುವರೆಸಲಾಗುತ್ತಿದೆ. ಡಿಸೆಂಬರ್ 15ರಂದು ಭಾನುವಾರದಿಂದ ಮುಂದಿನ ಅಮವಾಸ್ಯೆವರೆಗೆ ಪ್ರತಿ ಮಂಗಳವಾರ, ಶುಕ್ರವಾರ ಅಂದರೆ ಡಿ.17, 20, 24 ಹಾಗೂ 27ರವರೆಗೆ ಹುಬ್ಬಳ್ಳಿಯಿಂದ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ಸೇವೆ ಇರಲಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ