
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ವಿರುದ್ಧ ಬೆಳಗಾವಿ ಜಿಲ್ಲೆಯ ಇಬ್ಬರು ಮಾಜಿ ಸಚಿವರು ಹರಿಹಾಯ್ದಿದ್ದಾರೆ. ಶಾಸಕನೂ ಆಗದೆ ಉಪಮುಖ್ಯಮಂತ್ರಿ ಸ್ಥಾನಕ್ಕೇರಿರುವ ಲಕ್ಷ್ಮಣ ಸವದಿ ಕುರಿತು ಸಚಿವಸ್ಥಾನ ವಂಚಿತ ಉಮೇಶ ಕತ್ತಿ ಮತ್ತು ಅನರ್ಹ ಶಾಸಕ ರಮೇಶ ಜಾರಕಿಹೊಳಿ ತೀವ್ರ ಕಿಡಿ ಕಾರಿದ್ದಾರೆ.
ಅನರ್ಹ ಶಾಸಕರಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎನ್ನುವ ಸವದಿ ಹೇಳಿಕೆ ಇಬ್ಬರನ್ನೂ ಕೆರಳಿಸಿದೆ. ಲಕ್ಷ್ಮಣ ಸವದಿ ಯಾರಿಂದಾಗಿ ಉಪಮುಖ್ಯಮಂತ್ರಿಯಾಗಿದ್ದಾರೆ ಎನ್ನುವುದನ್ನು ನೆನಪಿಸಿಕೊಳ್ಳಬೇಕು. ಅನರ್ಹ ಶಾಸಕರ ಬಗ್ಗೆ ಹಗುರವಾಗಿ ಮಾತನಾಡಬಾರದು ಎಂದು ಉಮೇಶ ಕತ್ತಿ ಪ್ರತಿಕ್ರಿಯಿಸಿದ್ದಾರೆ.
10 ತಲೆಯ ರಾವಣನಂತ ಲಕ್ಷ್ಮಣ ಸವದಿ ಕೂಡ ಹಾಳಾಗುತ್ತಾನೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದಾರೆ. ಲಕ್ಷ್ಮಣ ಸವದಿ ಹಿಂದೆ ಕೂಡ ಸೊಕ್ಕಿನಿದಲೇ ಹಾಳಾಗಿದ್ದ. ಇನ್ನೂ ಹಾಳಾಗುತ್ತಾನೆ. ಆತ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಅವರು ಎಚ್ಚರಿಸಿದ್ದಾರೆ.
ಲಕ್ಷ್ಮಣ ಸವದಿ ತನ್ನ ನಾಲಿಗೆಯಿಂದಲೇ 2018ರಲ್ಲಿ ಸೋತಿದ್ದಾನೆ
ಮತ್ತೊಮ್ಮೆ ವಿವಾದಕ್ಕೆ ಬಿದ್ದ ಲಕ್ಷ್ಮಣ ಸವದಿ
ಅಮಿತ್ ಶಾಗೆ ಮತ್ತಷ್ಟು ಹತ್ತಿರವಾದರೇ ಲಕ್ಷ್ಮಣ ಸವದಿ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ