*ಭಾಷೆ ಮತಗಳನ್ನು ಮೀರಿ ಸಾಹಿತ್ಯ ಸೇವೆ ಸಾಗಲಿ: ಸವಿತಾ ಇನಾಮದಾರ*

ಪ್ರಗತಿವಾಹಿನಿ ಸುದ್ದಿ: ಅಖಿಲ ಭಾರತ ಕವಯತ್ರಿಯರ ಬೆಳಗಾವಿ ಘಟಕದ 26 ನೇ ಸಂಸ್ಥಾಪನಾ ದಿನಾಚರಣೆ ಇದೇ ದಿನಾಂಕ 6 ರಂದು ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ವಿಶೇಷ ಅತಿಥಿ ಯಾಗಿ ದೆಹಲಿಯಿಂದ ಆಗಮಿಸಿದ್ದ ಸವಿತಾ ಇನಾಮದಾರ ಕನ್ನಡತಿ, ಲೇಖಕಿ, ಗಾಯಕಿ,ನಟಿ,ದುಭಾಷಿ ಇವರು ಉದ್ಘಾಟಿಸಿ ಮಾತನಾಡುತ್ತಾ ಮಹಿಳೆಯರ ಸಾಂಘಿಕ ಶಕ್ತಿ ನೈಜ ಶಕ್ತಿ, ಸಾಹಿತ್ಯ ವು ಯುವ ಪೀಳಿಗೆಗೆ ಮಾದರಿಯಾಗಿದೆ ಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಜಾತಿ,ಭಾಷೆ,ಮಾತು ಪಂಥಗಳು ಸಂಕೋಲೆಯಿಂದ ಹೊರಬರಬೇಕು.ದೇಹಕ್ಕೆ ಮುಪ್ಪು ಬಂದರೂ ಮನಕೆ ಮುಪ್ಪು ಬರೋದಿಲ್ಲ ಹಾಗು ಸಾಹಿತ್ಯ ಸೇವೆಗೆ ಸೀಮೆ ಇಲ್ಲ, ಎಂಬ ಮಾತಿಗೆ ಬೆಳಗಾವಿಯ ಹಿರಿಯ ಎಐಪಿಸಿ ಸಹೋದರಿಯರು ಸಕ್ರಿಯವಾಗಿ ಇಲ್ಲಿ ಪಾಲ್ಗೊಂಡು ಸಾಬೀತು ಪಡಿಸಿದ್ದಾರೆ ಎಂದರು.
ದೆಹಲಿಯಂತ ಬೃಹತ್ ನಗರದಲ್ಲಿದ್ದರೂ ಅವರು ಸಾಹಿತ್ಯ ಕಲೆ ಸಂಗೀತದ ಮೂಲಕ ಸಮಾಜಮುಖಿಯಾಗಿ ಕನ್ನಡದ ಕಂಪನ್ನು ಹರಡಿ ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಮಹಿಳೆಯರನ್ನು ಒಗ್ಗೂಡಿಸುವ ಮಹತ್ತರ ಜವಾಬ್ದಾರಿ ಹೊತ್ತಿರುವ ಅಖಿಲ ಭಾರತ ಕವಯತ್ರಿ ಯರ ಸಂಘ 26 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಬೆಳಗಾವಿಯ ಸಹೋದರಿಯರು ಸಂಸ್ಥೆಯ ಧ್ಯೇಯೋದ್ದೇಶವನ್ನು ಉನ್ನತ ಮಟ್ಟದದಲ್ಲಿ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎಐಪಿಸಿ ರಾಷ್ಟ್ರೀಯ ಉಪಾಧ್ಯಕ್ಷೆ ಜ್ಯೋತಿ ಬದಾಮಿ ತಮ್ಮ ಸಂಘಟಿತ ಶಕ್ತಿಯಿಂದ ಬಹುಭಾಷಾ ಕವಿಗೋಷ್ಠಿ,ಗಜಲ್ ಹಾಗು ಜಾನಪದ ಗಾಯನ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವೇದಿಕೆ ನೀಡಿ ಸದಸ್ಯರನ್ನು ಹುರಿದುಂಬಿಸುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜ್ಯೋತಿ ಬದಾಮಿ ಸಭೆಗೆ ಸರ್ವರನ್ನು ಸ್ವಾಗತಿಸಿ ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ದೇಶ ವಿದೇಶಗಳಲ್ಲಿ 15,000 ಕ್ಕಿಂತ ಅಧಿಕ ಸದಸ್ಯರನ್ನು ಹೊಂದಿರುವ ಎಐಪಿಸಿ ಸಂಸ್ಥೆಯ ಸುದೀರ್ಘ 26 ವರ್ಷಗಳ ಪಯಣ ,ದೇಶ ವಿದೇಶಗಳಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಸಮ್ಮೇಳನಗಳು ಅಲ್ಲಿ ಮಹಿಳೆಯರಿಂದಲೇ ಮಹಿಳೆಯರಿಗಾಗಿ ನಡೆಯುವ ಅರ್ಥಪೂರ್ಣ ಕಾರ್ಯಕ್ರಮ ಕುರಿತು ಮಾಹಿತಿ ನೀಡಿದರು. ಗೋಕಾಕ, ಸಂಕೇಶ್ವರ,ಬೈಲಹೊಂಗಲದಿಂದ ಸದಸ್ಯರು ಆಗಮಿಸಿದ್ದರು.ಬಹುಭಾಷಾ ಕಾವ್ಯ ಧಾರೆ ಮತ್ತು ಗಜಲ್ ಗಾಯನ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದರು.ಕಾರ್ಯಕ್ರಮದ ಪ್ರಾಯೋಜಕರಾದ ಹಿರಿಯ ಕ್ರಿಯಾಶೀಲ ಜಯಶೀಲ ಬ್ಯಾಕೋಡ ಅವರನ್ನು ಗೌರವಿಸಲಾಯಿತು.ಲಲಿತಾ ಪರ್ವತರಾವ್ ಪ್ರಾರ್ಥನೆ ಮಾಡಿದರು.
ಶೈಲಜಾ ಕುಲಕರ್ಣಿ ಅತಿಥಿಗಳ ಪರಿಚಯ ಮಾಡಿದರು.ರಾಜನಂದಾ ಘಾರ್ಗಿ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.ಹೇಮಾ ಸೋನಳ್ಳಿ ವಂದಿಸಿದರು.ನೀಲಗಂಗಾ ಚರಂತಿಮಠ, ಶೈಲಜಾ ಭಿಂಗೆ,ಹಮೀದಾ ಬೇಗಂ,ಭಾರತಿ ಮದಭಾವಿ, ಪುಷ್ಪ ಮುರಗೋಡ, ದೀಪಿಕಾ ಚಾಟೆ,ರತ್ನಾ ಬೆಲ್ಲದ,ಶಾಂತಾ ಮಸೂತಿ, ಪ್ರಭಾ ಪಾಟೀಲ , ಅನ್ನಪೂರ್ಣ ಅಗಡಿ,ಮಹಾದೇವಿ ಅಜವಾನ,ಶುಭ ತೆಲಸಂಗ, ಪ್ರೇಮಾ ಪಾನಶೆಟ್ಟಿ, ಲಲಿತಾ,ಜ್ಯೋತಿ ಮಾಳಿ,ಮಹಾನಂದಾ ಪರುಶೆಟ್ಟಿ,ಆಶಾ ಸಂಸುದ್ದಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕವಯತ್ರಿಯರು ಭಾಗವಹಿಸಿ ಯಶಸ್ವಿಗೊಳಿಸಿದರು.

