
ಪ್ರಶಸ್ತಿ ಪುರಸ್ಕೃತರು –ವೃದ್ದಾಶ್ರಮದ ಸೇವೆಗಾಗಿ ರೇಖಾ ಕಣಬರಕರ್ ಮತ್ತು ಬಾಳವ್ವ ಎಸ್.ಮೂಲಿಮನಿ, ಜೀವಮಾನ ಸಾಧನೆಗಾಗಿ ವೈಜಯಂತಿ ಚೌಗಲಾ, ಪೊಲೀಸ್ ಸೇವೆಗಾಗಿ ಯಶೋಧಾ ವಂಟಗೂಡಿ, ಸಂಗೀತ ಕ್ಷೇತ್ರದ ಸೇವೆಗಾಗಿ ಅರ್ಚನಾ ಬೆಳಗುಂದಿ, ಸಮಾಜ ಸೇವೆಗಾಗಿ ಪ್ರತಿಭಾ ಆಪ್ಟೆ, ಭರತನಾಟ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ರೇಖಾ ಹೆಗಡೆ, ಶಿಕ್ಷಣ ಮತ್ತು ಸಬಲೀಕರಣದಲ್ಲಿನ ಸಾಧನೆಗಾಗಿ ಕೀರ್ತಿ ಶಿವಕುಮಾರ, ಅರಣ್ಯ ಮತ್ತು ಪ್ರಾಣಿ ಸಂರಕ್ಷಣೆಗಾಗಿ ರೋಹಿಣಿ ಪಾಟೀಲ, ಶಿಕ್ಷಣ ಕ್ಷೇತ್ರದ ಸೇವೆಗಾಗಿ ಸ್ವಾತಿ ಜೋಗ್, ಸಮಾಜ ಸೇವೆಗಾಗಿ ಸುರೇಖಾ ಪಾಟೀಲ ಮತ್ತು ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಮೈತ್ರೇಯಿ ಎಸ್.ಬೈಲೂರು.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಿಯತಿ ಫೌಂಡೇಶನ್ ವಿವಿಧ ಕ್ಷೇತ್ರಗಳಲ್ಲಿ ಸಮಾಜಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ 12 ಮಹಿಳೆಯರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿಗಳನ್ನು ನೀಡಿತು.
ಈಫಾ ಹೊಟೆಲ್ ಸಭಾಂಗಣದಲ್ಲಿ ಭಾನುವಾರ ಕಾರ್ಯಕ್ರಮ ನಡೆಯಿತು.

ಪ್ರಸಿದ್ಧ ಉದ್ಯಮಿ ರೋಹಿಣಿ ಗೋಗ್ಟೆ ಮತ್ತು ಜಿ ಜಿ ಚಿಟ್ನಿಸ್ ಶಾಲೆಯ ಪ್ರಾಂಶುಪಾಲರಾದ ನವೀನಾ ಶೆಟ್ಟಿಗಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಂತರ ಕಿಶೋರ್ ಕಾಕಡೆ ಮತ್ತು ಶರ್ಮಿಳಾ ಸಂಭಾಜಿ ಪ್ರಶಸ್ತಿ ಪುರಸ್ಕೃತರನ್ನು ಪ್ರೇಕ್ಷಕರಿಗೆ ಪರಿಚಯಿಸಿ, ಅವರ ಸಾಧನೆಗಳನ್ನು ಸಭೆಗೆ ಪರಿಚಯಿಸಿದರು. ನಂತರ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ವಿಜೇತರು ತಮ್ಮ ಅನುಭವಗಳನ್ನು ಹಂಚಿಕೊಂಡರು.


ನಿಯತಿ ಫೌಂಡೇಶನ್‌ನ ಕಾರ್ಯದರ್ಶಿ ಮೊನಾಲಿ ಶಾ ಅವರು ವಂದಿಸಿದರು. ವಂದೇ ಮಾತರಂ ಪಠಣದ ನಂತರ ಕಾರ್ಯಕ್ರಮವು ಮುಕ್ತಾಯವಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ