Kannada NewsKarnataka NewsLatest

ಸಾವಿತ್ರಿಬಾಯಿ ಫುಲೆ ಸರ್ವ ಮಹಿಳೆಯರಿಗೆ ಆದರ್ಶಪ್ರಾಯ: ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಸ್ತ್ರೀಯರ ಬಾಳು ಬೆಳಗಿದ ವಿದ್ಯಾದಾತೆ, ದೇಶದ ಮೊದಲ ಮಹಿಳಾ ಶಿಕ್ಷಕಿ, ಸಮಾಜ ಸುಧಾರಕಿ ಹಾಗೂ ಮಹಿಳಾ ಹೋರಾಟಗಾರ್ತಿಯಾಗಿ ಹೊರಹೊಮ್ಮಿದ  ಸಾವಿತ್ರಿಬಾಯಿ ಫುಲೆಯವರು ಸರ್ವ ಮಹಿಳೆಯರಿಗೆ ಆದರ್ಶಪ್ರಾಯರು ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.

ಅವರು ಬೆನಕನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಅರಿಶಿಣ ಕುಂಕುಮ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಅಕ್ಷರದವ್ವ ಖ್ಯಾತಿಯ  ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಗೌರವ ನಮನವನ್ನು ಸಲ್ಲಿಸಿ ಮಾತನಾಡಿದರು.

ಈ ಸಮಯದಲ್ಲಿ ಗ್ರಾಮದ ಹಿರಿಯರಾದ ಬಾಳು ದೇಸೂರಕರ, ಮೋನಪ್ಪ ಪಾಟೀಲ, ಕಲ್ಲಪ್ಪ ದೇಸೂರಕರ್, ಜ್ಯೋತಿಬಾ ದೇಸೂರಕರ, ಜ್ಯೋತಿಬಾ ಪಿಸಾಳೆ, ಮಲ್ಲೇಶ ಕುರಂಗಿ, ಗುಂಡು ಪಾಟೀಲ, ಲತಾ ಪಾವಸೆ, ಮೀನಾಕ್ಷಿ ಪಾಟೀಲ, ಶಿಲ್ಪಾ ಮುಂಗಳಿಕರ್, ಬಲವಂತ ಪಾಟೀಲ, ಕಲ್ಲಪ್ಪ ಪಾಟೀಲ, ಶಿವಾಜಿ ಪಾಟೀಲ, ವಿನೋದ ದೇಸೂರಕರ್, ಮದನ ಪಾಟೀಲ, ಗಜಾನನ ಪಾಟೀಲ, ಉಮೇಶ ಪಿಸಾಳೆ, ಆಪ್ತ ಸಹಾಯಕರು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ರಸ್ತೆಗಳಿಗೆ ಇಲ್ಲ ಮರು ಜನ್ಮ – ವೆಚ್ಚಕ್ಕಿದೆ ಹಲವು ಜನ್ಮಗಳು !

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button