Latest

ಖ್ಯಾತ ನಿರ್ದೇಶಕ ಮುರಳಿಕೃಷ್ಣ ಇನ್ನಿಲ್ಲ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಕೆ.ಆರ್.ಮುರಳಿಕೃಷ್ಣ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ನಿನ್ನೆ ಹೃದಯಾಘಾತಕ್ಕೀಡಾಗಿದ್ದ ಮುರಳಿ ಕೃಷ್ಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕೆಲ ಸಿನಿಮಾಗಳಿಗೆ ಬಂಡವಾಳವನ್ನೂ ಹೂಡಿದ್ದ ಮುರಳಿಕೃಷ್ಣ ಹಲವು ಜನಪ್ರಿಯ ಸಿನಿಮಾಗಳಿಗೆ ನಿರ್ದೇಶಕರಾಗಿದ್ದರು. ಬ್ರೇನ್ ಟ್ಯೂಮರ್ ನಿಂದ ಬಳಲುತ್ತಿದ್ದ ಮುರಳಿಕೃಷ್ಣ ಅವರಿಗೆ ಇತ್ತೀಚೆಗೆ ಸರ್ಜರಿ ಮಾಡಲಾಗಿತ್ತು. ಆದರೆ ಸರ್ಜರಿ ಬಳಿಕ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ.

Home add -Advt

ಮುರಳಿಕೃಷ್ಣ ಇಬ್ಬರು ಹೆಣ್ಣುಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ. ಬೆಂಗಳೂರಿನ ಸಹಕಾರನಗರ ನಿವಾಸದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ಹೆಬ್ಬಳ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.

ಗರ, ಬಾಳನೌಕೆ, ಕರ್ಣನ ಸಂಪತ್ತು, ಹೃದಯ ಸಾಮ್ರಾಜ್ಯ, ಮರಳಿ ಗೂಡಿಗೆ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳನ್ನು ಕೆ.ಆರ್.ಮುರಳಿಕೃಷ್ಣ ನಿರ್ದೇಶನ ಮಾಡಿದ್ದರು.

 

ರಸ್ತೆಗಳಿಗೆ ಇಲ್ಲ ಮರು ಜನ್ಮ – ವೆಚ್ಚಕ್ಕಿದೆ ಹಲವು ಜನ್ಮಗಳು !

https://pragati.taskdun.com/choas-of-roads-of-karnataka-a-special-article/

Related Articles

Back to top button