
ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಸಾಲು ಸಾಲು ಎಟಿಎಂ, ಬ್ಯಾಂಕ್ ದರೋಡೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಬೀದರ್ ನಲ್ಲಿ ಹಾಡ ಹಗಲೇ ಎಟಿಎಂ ದರೋಡೆ ಪ್ರಕರಾಣ ನಡೆದ ಬೆನ್ನಲ್ಲೇ ಮಂಗಳೂರು ಸೇರಿದಂತೆ ವಿವಿಧಡೆ ಇಂತದ್ದೇ ಪ್ರಕರಣಗಳು ನಡೆಯುತ್ತಿವೆ. ಇದೀಗ ಕಲಬುರಗಿಯಲ್ಲಿ ಕಳ್ಳರು ಎಟಿಎಂನಲ್ಲಿದ್ದ ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಕಲಬುರಗಿ ಜಿಲ್ಲೆಯ ಪೂಜಾರಿ ಚೌಕ್ ನಲ್ಲಿರುವ ಎಬಿಐ ಬ್ಯಾಂಕ್ ಎಟಿಎಂ ನಲ್ಲಿ ದರೋಡೆ ನಡೆದಿದೆ. ಗ್ಯಾಸ್ ಕಟರ್ ನಿಂದ ಎಟಿಎಂ ಡೆದು ಎಟಿಎಂನಲ್ಲಿದ್ದ 18 ಲಕ್ಷ ಹಣವನ್ನು ದೋಚಿ ಕಳ್ಳರು ಪರಾರಿಯಾಗಿದ್ದಾರೆ.
ಸಿಸಿಟಿವುಇ ಕ್ಯಾಮರಾಗೆ ಬ್ಲ್ಯಾಕ್ ಸ್ಪ್ರೇ ಸಿಂಪಡಿಸಿ ಕಳ್ಳರು ಕೈಚಳಕ ತೋರಿದ್ದಾರೆ. ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನಿನ್ನೆ ಸಂಜೆ ಬ್ಯಾಂಕ್ ಸಿಬ್ಬಂದಿ ಎಟಿಎಂಗೆ 18 ಲಕ್ಷ ಹಣ ತುಂಬಿದ್ದರು. ಇಂದು ಬೆಳಗಾಗುವಷ್ಟರಲ್ಲಿ ಕಳ್ಳರು ಎಟಿಎಂ ಒಡೆದು ಹಣ ದರೋಡೆ ಮಾಡಿ ಪರಾರಿಯಾಗಿದ್ದಾರೆ.
ಕಲಬುರಗಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.