
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ 7 ಶಾಲೆಗಳಿಗೆ ಬಂಬ್ ಬೆದರಿಕೆ ಹಾಕಿದ್ದ ಆರೋಪದಲ್ಲಿ ಮಹಿಳಾ ಟೆಕ್ಕಿಯೊಬ್ಬಳ ನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ರೆನೆ ಜೊಶಿಲ್ಡಾ ಬಂಧಿತ ಆರೋಪಿ. ಬೆಂಗಳೂರಿನ ಏಳು ಶಾಲೆಗಳಿಗೆ ಹಾಗೂ ಚೆನ್ನೈ, ಹೈದರಾಬಾದ್ ನ ಶಾಲೆಗಳಿಗೂ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿದ್ದಳು. ತನಿಖೆ ನಡೆಸಿದ ಬೆಂಗಳುರು ಸೈಬರ್ ಕ್ರೈಂ ಪೊಲೀಸರು ರೆನೆ ಜೊಶಿಲ್ಡಾಳನ್ನು ಬಂಧಿಸಿದ್ದಾರೆ.
ರೆನೆ ಜೊಶಿಲ್ಡಾ ರೊಬೋಟಿಕ್ ಇಂಜಿನಿಯರ್ ಆಗಿದ್ದಳು. ಪ್ರಭಾಕರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ ಪ್ರಭಾಕರ್ ಬೇರೊಂದು ಯುವತಿಯೊಂದಿಗೆ ವಿವಾಹವಾಗಿದ್ದ. ಇದರಿಂದ ನೊಂದಿದ್ದ ರೆನಾ ಜೊಶಿಲ್ಡಾ, ಬೆಂಗಳೂರು, ಹೈದರಾಬಾದ್, ಚೆನ್ನೈನ ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿ ಅದನ್ನು ಪ್ರಭಾಕರ್ ಮಾಡುತ್ತಿರುವುದು ಎಂದು ಆತನನ್ನು ಸಿಕ್ಕಿಸಲು ಯತ್ನಿಸಿದ್ದಳು.
ಆತ ಬೇರೆ ವಿವಾಹವಾಗಿದ್ದಕ್ಕೆ ಆತನ ಹೆಸರಲ್ಲಿ ರೆನೆ ಬಾಂಬ್ ಬೆದರಿಕೆ ಹಾಕುತ್ತಿದ್ದಳು ಎಂದು ತಿಳಿದುಬಂದಿದೆ.

