ಪ್ರಗತಿವಾಹಿನಿ ಸುದ್ದಿ; ರಾಮನಗರ: ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಪ್ರವಾಶಕ್ಕೆ ತೆರಳುತ್ತಿದ್ದ ಬಸ್ ಗಳ ಅಪಘಾತ ಪ್ರಕರಣ ಹೆಚ್ಚುತ್ತಿದೆ. ಇದೀಗ ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ಮತ್ತೊಂದು ಶಾಲಾ ಬಸ್ ಪಲ್ಟಿಯಾಗಿರುವ ಘಟನೆ ರಾಮನಗರದಲ್ಲಿ ನಡೆದಿದೆ.
ರಾಮನಗರದ ಸರ್ಕಾರಿ ಪ್ರೌಢಶಾಲೆಯಿಂದ ಮಕ್ಕಳ ಪ್ರವಾಸಕ್ಕಾಗಿ ಎರಡು ಬಸ್ ಗಳು ತೆರಳಿದ್ದವು. ಎರಡು ಬಸ್ ಗಳಲ್ಲಿ ಒಟ್ಟು 71 ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಇದ್ದರು. ಈ ಪೈಕಿ ಒಂದು ಬಸ್ ಚಾಲಕನ ನಿಯಂತ್ರನ ತಪ್ಪಿ ಬೇಲೂರಿನ ನಿಡಗೋಡು ಗ್ರಾಮದ ಬಳಿ ಪಲ್ಟಿಯಾಗಿ ಬಿದ್ದಿದೆ.
ಘಟನೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಸೇರಿ 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.ಗಾಯಾಳುಗಳನ್ನು ಹಾಸನ ಹಾಗೂ ಬೇಲೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
*KSRTC, BMTC ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯ*
https://pragati.taskdun.com/ksrtcbmtcmetromask-rulscovidbf-7-virus/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ