Latest

*ಪ್ರವಾಸಕ್ಕೆ ತೆರಳುತ್ತಿದ್ದ ಶಾಲಾ ಬಸ್ ಅಪಘಾತ*

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಶೈಕ್ಷಣಿಕ ಪ್ರವಾಸದ ನಿಮಿತ್ತ ಶಾಲಾ ಮಕ್ಕಳನ್ನು ಪ್ರವಾಸಕ್ಕೆ ಕೊಂಡೊಯ್ಯುತ್ತಿದ್ದ ಬಸ್ ಅಪಘಾತಕ್ಕೀಡಾಗಿರುವ ಘಟನೆ ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ನಡೆದಿದೆ.

ಹಗರಿಬೊಮ್ಮನಹಳ್ಳಿ ಬಳಿ ರಸ್ತೆ ಗುಂಡಿಯಲ್ಲಿ ಬಸ್ ಬಿದ್ದಿದ್ದು, ಬಸ್ ನ 4 ಟೈರ್ ಗಳು ಕಿತ್ತು ಹೊರಬಂದಿವೆ. ಬಸ್ ನಲ್ಲಿ ಶಿಕ್ಷಕರು, ಮಕ್ಕಳು ಸೇರಿ 53 ಜನರಿದ್ದರು.

Home add -Advt

ಅದೃಷ್ಟವಶಾತ್ ಮಕ್ಕಳು, ಶಿಕ್ಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಡ್ಯದ ಮದ್ದೂರಿನ ಶಾಲೆಯ ಮಕ್ಕಳು ಶೈಕ್ಷಣಿಕ ಪ್ರವಾಸಕ್ಕೆ ಖಾಸಗಿ ಬಸ್ ಅಲ್ಲಿ ಹೊರಟಿದ್ದರು. ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ಬಸ್ ಅಪಘಾತಕ್ಕೀಡಾಗಿದೆ.

*ಕಾಂಗ್ರೆಸ್ ನಿಂದ ಬೆಳಗಾವಿಯಲ್ಲಿ ಮಹದಾಯಿ, ಕೃಷ್ಣಾ ಸಮಾವೇಷ*

 

https://pragati.taskdun.com/belagavid-k-shivakumarkrishna-mahadai-meeting/

Related Articles

Back to top button