Latest

ಆನ್ ಲೈನ್ ಕ್ಲಾಸ್ ಗಳಿಗಿಂತ ಮಕ್ಕಳು ಶಾಲೆಗೆ ಬಂದು ಕಲಿತರೆ ಪರಿಪೂರ್ಣ: ಸಚಿವ ಸುರೇಶ್ ಕುಮಾರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯಾದ್ಯಂತ ಇಂದಿನಿಂದ ಶಾಲಾ-ಕಾಲೇಜು, ವಿದ್ಯಾಗಮ ಪುನರಾರಂಭವಾಗಿದ್ದು, ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.

ಈ ವೇಳೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ಆನ್ ಲೈನ್ ಕ್ಲಾಸ್ ಗಳಿಗಿಂತ ಮಕ್ಕಳು ಶಾಲೆಗೆ ಬಂದು ಕಲಿತರೆ ಪರಿಪೂರ್ಣರಾಗುತ್ತಾರೆ. ಶಾಲೆಗಳು ಪುನರಾರಂಭವಾಗಿವೆ. ಶಾಲೆಗಳು ಸುರಕ್ಷತಾ ಕೇಂದ್ರಗಳಂತಿದ್ದು, ಪೋಷಕರು ಧೈರ್ಯವಗೈ ಮಕ್ಕಳನ್ನು ಕಳುಹಿಸಬಹುದು ಎಂದರು.

ಹೊಸ ವರ್ಷ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಬಂದಿಲ್ಲ. ಸೋಮವಾರದಿಂದ ಬರಬಹುದು ಎಂದು ಹೇಳಿದರು. ಹೊಸ ಪ್ರಭೇದದ ಕೊರೊನಾ ಕೂಡ ಹಳೆ ಕೊರೊನಾದಂತೆಯೇ ಇದೆ. ಆದರೆ ವೇಗವಾಗಿ ಹರಡುತ್ತೆ ಅಷ್ಟೇ. ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಪೋಷಕರಲ್ಲಿ ಆತಂಕ ಬೇಡ ಎಂದು ತಿಳಿಸಿದರು.

ಶಾಲೆ-ಕಾಲೇಜುಗಳು ಆರಂಭ; ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷೆ ಬಗ್ಗೆ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button