Latest

ರಸ್ತೆ ಮೇಲೆ ಹ್ಯಾಪಿ ನ್ಯೂ ಇಯರ್ ಬರೆಯಲು ಹೋಗಿ ಭೀಕರ ಅಪಘಾತ; ಇಬ್ಬರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಉಡುಪಿ: ಹೊಸ ವರ್ಷದ ಸಂಭ್ರಮದಲ್ಲಿ ರಸ್ತೆ ಮೇಲೆ ಹ್ಯಾಪಿ ನ್ಯೂ ಇಯರ್ ಎಂದು ಬರೆಯಲು ಮುಂದಾದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳದ ಮೀಯಾರು ಕಾಜರ ಬೈಲು ಎಂಬಲ್ಲಿ ನಡೆದಿದೆ.

ಶರಣ್ ಹಾಗೂ ಸಿದ್ದು ಮೃತ ದುರ್ದೈವಿಗಳು. ಬಾಗಲಕೋಟೆ ಮೂಲದವರಾದ ಇವರು ರಸ್ತೆ ಮಧ್ಯೆ ಹೊಸ ವರ್ಷಕ್ಕೆ ಶುಭಾಷಯ ಸಂದೇಶ ಬರೆಯಲು ಮುಂದಾಗಿದ್ದಾರೆ. ಈ ವೇಳೆ ವೇಗವಾಗಿ ಬಂದ ಇಕೋ ಕಾರು ಡಿಕ್ಕಿ ಹೊಡೆದಿದೆ.

Home add -Advt

ಪರಿಣಾಮ ಓರ್ವ ಯುವಕ ರಸ್ತೆಯಲ್ಲೇ ಮೃತಪಟ್ಟಿದ್ದರೆ, ಇನ್ನೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

Related Articles

Back to top button