Latest

ಸಂಗಾತಿ ಕಳೆದುಕೊಂಡ ನೋವಲ್ಲಿ ರೈಲ್ವೆ ಹಳಿ ಮೇಲೆ ಕುಳಿತ ಕೊಕ್ಕರೆ; 23 ರೈಲ್ವೆ ಸಂಚಾರ ನಿಲ್ಲಿಸಿದ ಅಧಿಕಾರಿಗಳು

ಪ್ರಗತಿವಾಹಿನಿ ಸುದ್ದಿ; ಬರ್ಲಿನ್: ತನ್ನ ಸಂಗಾತಿಯನ್ನು ಕಳೆದುಕೊಂಡು ರೈಲು ಹಳಿಯ ಮೇಲೆ ಕುಳಿತು ರೋಧಿಸುತ್ತಿದ್ದ ಕೊಕ್ಕರೆ ಸಂಕಟಕ್ಕೆ ಮರುಗಿದ ರೈಲ್ವೆ ಇಲಾಖೆ ಅಧಿಕಾರಿಗಳು 23 ರೈಲು ಸಂಚಾರವನ್ನು ವಿಳಂಬ ಮಾಡಿರುವ ಘಟನೆ ಬರ್ಲಿನ್ ನಲ್ಲಿ ಬೆಳಕಿಗೆ ಬಂದಿದೆ.

ರೈಲ್ವೆ ಹಳಿ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ತಗುಲಿ ಕೊಕ್ಕರೆಯ ಸಂಗಾತಿ ಸಾವನ್ನಪ್ಪಿದೆ. ಜತೆಗಾರನನ್ನು ಕಳೆದುಕೊಂಡ ಕೊಕ್ಕರೆ ಕಣ್ಣೀರಿಡುತ್ತಾ ದಿಕ್ಕು ತೋಚದೇ ಹಳಿಗಳ ಮೇಲೆ ಕುಳಿತು ರೋಧಿಸುತ್ತಿತ್ತು. ಕೊಕ್ಕರೆಯ ನೊವು, ಸಂಕಟ ಕಂಡು ರೈಲ್ವೆ ಅಧಿಕಾರಿಗಳು ಮರುಗಿದ್ದಾರೆ.

Home add -Advt

ಘಟನೆಯಿಂದಾಗಿ ಸುಮಾರು 50 ನಿಮಿಷಗಳ ಕಾಲ ರೈಲು ಸಂಚಾರ ವಿಳಂಬ ಮಾಡಲಾಗಿದ್ದು, ಬರೋಬ್ಬರಿ 23 ರೈಲು ಸಂಚಾರ ತಡವಾಗಿ ಚಲಿಸಿದೆ. ಬಳಿಕ ರೈಲ್ವೆ ಅಧಿಕಾರಿಗಳು ಕೊಕ್ಕರೆಯನ್ನು ರಕ್ಷಿಸಿ ಸಮೀಪದ ನದಿಗೆ ಬಿಟ್ಟಿದ್ದಾರೆ.

Related Articles

Back to top button